ನವದೆಹಲಿ: ಕೆಲ ದಿನಗಳ ಹಿಂದೆ ಸುಪ್ರೀಂ ಕೋರ್ಟ್ ನಿಂದ ಎಸ್ಸಿ, ಎಸ್ಟಿ ಮೀಸಲಾತಿಗೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಲಾಗಿತ್ತು. ಆದರೇ ಈ ತೀರ್ಪು ವಿರೋಧಿಸಿ ಆಗಸ್ಟ್.21ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದೆ.
ಈ ಕುರಿತಂತೆ ವಿವಿಧ ದಲಿತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ಪತ್ರದ ಮೂಲಕ ಆಗಸ್ಟ್.21ರಂದು ಭಾರತ್ ಬಂದ್ ನಡೆಸಲಾಗುವುದು ಎಂಬುದಾಗಿ ಅಧಿಕೃತ ಮಾಹಿತಿಯನ್ನು ತಿಳಿಸಿವೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾತಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವಂತ ತೀರ್ಪು ವಿರೋಧಿಸಿ ಆಗಸ್ಟ್.21ರಂದು ಬೆಳಿಗ್ಗೆ 5 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಭಾರತ್ ಬಂದ್ ನಡೆಸಲಾಗುತ್ತಿದೆ. ಇದರಲ್ಲಿ ವಿವಿಧ ಸಂಘಟನೆಗಳು ಭಾಗಿಯಾಗಲಿದ್ದಾವೆ ಎಂಬುದಾಗಿ ಸರ್ವ ಆದಿವಾಸಿ ಸಮಾಜದ ವಿಭಾಗೀಯ ಅಧ್ಯಕ್ಷ ಪ್ರಕಾಶ್ ಠಾಕೋರ್ ತಿಳಿಸಿದ್ದಾರೆ.
BREAKING: ಶಿಕಾರಿಪುರದಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ BSY ಮನೆಗೆ ಮುತ್ತಿಗೆ ಯತ್ನ, ಹಲವರನ್ನು ಪೊಲೀಸರು ವಶಕ್ಕೆ
ಮಹಿಳೆಯರಿಗೆ ಮತ್ತೊಂದು ಗುಡ್ ನ್ಯೂಸ್ : ಸರ್ಕಾರದಿಂದ ಸಿಗಲಿದೆ ಬಡ್ಡಿ ರಹಿತ 5 ಲಕ್ಷ ರೂ.ವರೆಗೆ ಸಾಲ!