ಬೆಳಗಾವಿ : ಬೆಳಗಾವಿ ನಗರದ ಸುಪ್ರಸಿದ್ದ ಕಪಿಲೇಶ್ವರ್ ದೇವಸ್ಥಾನದಲ್ಲಿ ಬಾಂಬ್ ಬೆದರಿಕೆ ಕರೆ ಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದ ಮೂಲಕ ಕಪಿಲೇಶ್ವರ ದೇವಸ್ಥಾನಕ್ಕೆ ಬೆದರಿಕೆ ಸಂದೇಶ ಕಳುಹಿಸಲಾಗಿದೆ. Marvelous belgaum ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆದಾರ ರಾಕೇಶ್ ನಂದಗಡಕರ ಅವರು ಆಗಸ್ಟ್ 12 ರಂದು ಕಪಿಲೇಶ್ವರ ದೇವಸ್ಥಾನದ ಪಲ್ಲಕ್ಕಿ ಉತ್ಸವದ ಸ್ಟೋರಿ ಹಾಕಿದ್ದರು. ಈ ಸ್ಟೋರಿಗೆ ಇಲಾಯಿತ್ ಎಂಬಾತ ರಿಪ್ಲೈ ಮಾಡಿದ್ದು, “ಮಾಷಾ ಅಲ್ಲಾ ಇದರ್ ಬಾಂಬ್ ಪೋಡುಂಗಾ ಏಕ್ ದಿನ್ ಅಂತಾ ಮೆಸೇಜ್ ಹಾಕಿದ್ದಾನೆ.
ರಾಕೇಶ್ ನಂದಗಡಕರ ಬೆಳಗಾವಿ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು,ಬೆಳಗಾವಿ ಸೈಬರ್ ಕ್ರೈಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.