ಲೆಬನಾನ್: ದಕ್ಷಿಣ ಲೆಬನಾನ್ ನ ನಬಾಟಿಹ್ ನಗರದ ವಸತಿ ಕಟ್ಟಡದ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಶನಿವಾರ ಮುಂಜಾನೆ ತಿಳಿಸಿದೆ.
ಇಸ್ರೇಲ್ ಆಕ್ರಮಿತ ಗೋಲನ್ ಹೈಟ್ಸ್ನಲ್ಲಿ ನಡೆದ ಮಾರಣಾಂತಿಕ ರಾಕೆಟ್ ದಾಳಿಯ ನಂತರ ಇತ್ತೀಚಿನ ವಾರಗಳಲ್ಲಿ ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದೆ. ಬೈರುತ್ ಉಪನಗರದಲ್ಲಿ ಉನ್ನತ ಹಿಜ್ಬುಲ್ಲಾ ಕಮಾಂಡರ್ ಹತ್ಯೆಯೊಂದಿಗೆ ಇಸ್ರೇಲ್ ಪ್ರತಿಕ್ರಿಯಿಸಿದೆ.
ಟೆಹ್ರಾನ್ ನಲ್ಲಿ ಫೆಲೆಸ್ತೀನ್ ಹಮಾಸ್ ಗುಂಪಿನ ರಾಜಕೀಯ ಮುಖ್ಯಸ್ಥ ಇಸ್ಮಾಯಿಲ್ ಹನಿಯೆಹ್ ಅವರ ಹತ್ಯೆಗೆ ಇರಾನ್ ನಂತೆ ಇಸ್ರೇಲ್ ವಿರುದ್ಧವೂ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಪ್ರತಿಜ್ಞೆ ಮಾಡಿದೆ