ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ (Dengue) ಪ್ರಕರಣ ಹಚ್ಚುತ್ತಿರುವ ಬೆನ್ನಲ್ಲೆ ಶಾಲೆಗಳಲ್ಲಿ (School) ಮುಂಜಾಗ್ರತೆ ಕ್ರಮ ಕೈಗೊಳ್ಳಲು ಸರ್ಕಾರ ಮಹತ್ವದ ಆದೇಶ ಹೊಡಿಸಿ ವಿಷಯಾನ್ಯಯವಾಗಿ, ರಾಜ್ಯದಲ್ಲಿ ಡಂಗ್ಯೂ, ಚಿಕೂನ್ ಗುನ್ಯ ಹಾಗೂ ಜಿಕಾ ಮುಂತಾದ ರೋಗಗಳು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆಯ ನಿರ್ದೇಶನದಂತೆ ಶಾಲೆಗಳಲ್ಲಿ ವಹಿಸಬೇಕಾದ ಮುಂಜಾಗ್ರತ ಕ್ರಮಗಳ ಇಲಾಖಾವತಿಯಿಂದ ಈಗಾಗಲೇ ಉಲ್ಲೇಖ-1 ರನ್ವಯ ಅಗತ್ಯ ನಿರ್ದೇಶನ ನೀಡಲಾಗಿರುತ್ತದೆ.
ಕುರಿತುಪ್ರಸ್ತುತ, 2024ನೇ ಸಾಲಿನಲ್ಲಿ ದಿನಾಂಕ: 28.7 2024ರ ವರೆಗೆ ರಾಜ್ಯದಲ್ಲಿ ವರದಿಯಾಗಿರುವ ಒಟ್ಟು 17,227 ಡಂಗೂ ಪ್ರಕರಣಗಳ ಪೈಕಿ 25% ಡಂಗೂ ಪ್ರಕರಣಗಳು 6 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ಕಂಡುಬಂದಿರುತ್ತದೆ.
ಈ ಹಿನ್ನಲೆಯಲ್ಲಿ 6 ರಿಂದ 16 ವರ್ಷ ವಯಸ್ಸಿನ ಮಕ್ಕಳಲ್ಲಿ ಇಂತಹ ರೋಗಗಳನ್ನು ತಡೆಗಟ್ಟಲು ವಹಿಸಬೇಕಾದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಹಾಗೂ ಶಾಲಾ ಮಕ್ಕಳು ಈ ರೋಗಗಳಿಗೆ ಈಡಾದಲ್ಲಿ ಸೂಕ್ತ ಚಿಕಿತ್ಸೆಯನ್ನು ಪಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಉಲ್ಲೇಖ-02ರಲ್ಲಿ ಕಳಕಂಡಂತೆ ವಿಸ್ತ್ರತವಾಗಿ ತಿಳಿಸಲಾಗಿದೆ.
ಡಂಗೂ ಜ್ವರವು ಈಡಿಸ್ ಜಾತಿಯ ಸೊಳ್ಳೆಯು ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡಲಿದ್ದು, ಇದು ಮುಂಗಾರು ಹಾಗೂ ನಂತರದ ದಿನಗಳಲ್ಲಿ ಹಚ್ಚಾಗಿ ಕಂಡು ಬರುತ್ತದ, ಇದಕ್ಕೆ ನಿರ್ದಿಷ್ಟ ಚಿಕಿತ್ಸೆ ಹಾಗೂ ಮುಂಜಾಗ್ರತಾ ಲಸಿಕೆ ಇಲ್ಲದಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ಜ್ವರದ ಲಕ್ಷಣಗಳು ಕಂಡು ಬಂದ ತಕ್ಷಣವೇ ವೈದ್ಯರನ್ನು ಭೇಟಿ ಮಾಡಿ ಅಗತ್ಯ ಚಿಕಿತ್ಸೆಯನ್ನು ಪಡೆಯುವುದು ಅಗತ್ಯವಾಗಿರುತ್ತದೆ.
ಸಾಮಾನ್ಯ ಡೆಂಗ್ಯೂ ಜ್ವರ ಪ್ರಕರಣಗಳು ಅಗತ್ಯ ಚಿಕಿತ್ಸೆ, ಹೆಚ್ಚು ದ್ರವಾಹಾರ ಸೇವನೆ ಮತ್ತು ಹೆಚ್ಚು ವಿಶ್ರಾಂತಿ ಪಡೆಯುವುದರಿಂದ ಗುಣಮುಖವಾಗುತ್ತದೆ. ಆದರೆ, ಜ್ವರ ಗುಣಮುಖವಾಗಿ 3-4 ದಿನಗಳ ನಂತರ ನೀವು ಹೊಟ್ಟೆ ನೋವು ವಾಂತಿ, ಅತಿಯಾದ ಸುಸ್ತು ತಲೆ ಸುತ್ತುವುದು, ಕಣ್ಣು ಕತ್ತಲೆ ಬರುವುದು, ಚರ್ಮ ಬಿಳುಚಿಕೊಳ್ಳುವುದು . ಈ ಲಕ್ಷಣಗಳು ಕಂಡುಬಂದಲ್ಲಿ ಇವು ‘ತೀವು ಡೆಂಗ್ಯೂ ಜ್ವರದ’ ( Severe Dengue Forms) ಲಕ್ಷಣಗಳಾಗಿದ್ದು, ತಕ್ಷಣವೇ ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯಬೇಕಿರುತ್ತದೆ. ಈಡಿಸ್ ಜಾತಿಯ ಸೊಳ್ಳೆಗಳು ಹಗಲು ಹೊತ್ತಿನಲ್ಲಿ ಹೆಚ್ಚಾಗಿ ಕಚ್ಚುತ್ತವೆ. ಹಗಲು ಹೊತ್ತಿನಲ್ಲಿ ಶಾಲೆಯಲ್ಲಿರುವ ಶಿಕ್ಷಕರು, ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಈಡಿಸ್ ಸೊಳ್ಳೆ ಕಚ್ಚುವಿಕೆಯಿಂದ ರಕ್ಷಿಸಿಕೊಳ್ಳುವುದು ಅವಶ್ಯವಾಗಿದ್ದು ಇದರಿಂದ ಡೆಂಗ್ಯೂ ಜ್ವರ ಹರಡುವ ಅಪಾಯವನ್ನು ತಪ್ಪಿಸಬಹುದಾಗಿದೆ.ಡಂಗ್ಯೂ ಜ್ವರ ಹರಡುವ ಈಡಿಸ್ ಜಾತಿಯ ಸೊಳ್ಳೆಗಳು, ಶಾಲೆಯಲ್ಲಿ ವಿವಿಧ ಉದ್ದೇಶಗಳಿಗೆ (ಕುಡಿಯುವ ನೀರು/ ಅಡುಗೆ ಮನೆ / ಊಟದ ತಟ್ಟೆಗಳನ್ನು ತೊಳೆಯಲು / ಶೌಚಾಲಯ/ ಶಾಲಾ ಉದ್ಯಾನವನಕ್ಕೆ ನೀರು ಹಾಯಿಸಲು, ಇತ್ಯಾದಿ) ಸಂಗ್ರಹಿಸುವ ಶುದ್ಧ ನೀರಿನ ಪರಿಕರಗಳಲ್ಲಿ ಅಂದರೆ, ಸಿಮೆಂಟ್ ತೊಟ್ಟಿ, ಮುಚ್ಚಳವಿಲ್ಲದ ಸಿಂಟಿಕ್ಸ್ ಟ್ಯಾಂಕ್, ಪ್ಲಾಸ್ಮಿಕ್ ಡ್ರಂ | ಬ್ಯಾರಲ್ ಗಳು, ಬಕೆಟ್ ಕೊಡಪಾನ, ಅಲಂಕಾರಿಕ ಕಾರಂಜಿಗಳು, ಇತ್ಯಾದಿಗಳಲ್ಲಿ ಬೆಳೆಯುತ್ತದೆ. ಹಾಗೂ ಶಾಲಾ ಆವರಣದಲ್ಲಿನ ಹೂಕುಂಡಗಳ ಕೆಳಗಿರುವ ತಟ್ಟೆ (Pot saucers) ಗಳು, ಮನಿಪ್ಲಾಂಟ್ ಹಾಗೂ ಇತರ ಅಲಂಕಾರಿಕ ಗಿಡಗಳನ್ನಿಡುವ ನೀರು, ಶಾಲೆಯ ಆವರಣದಲ್ಲಿ ತೂಗು ಹಾಕಿರುವ Bird bath ಗಳು, ಶಾಲಾ ವಾಹನಗಳ ಬಳಸದ ಇರುವ ಟೈರ್ ಗಳು, ಶಾಲಾ ಆವರಣದಲ್ಲಿ ಬಿಸುಟಿರುವ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಹಾಗೂ ಶಾಲಾ ಕಟ್ಟಡ ಮತ್ತು ಶಾಲಾ ಆವರಣದಲ್ಲಿರುವ ಇತರ ಕಟ್ಟಡಗಳ ಟೆರೆಸ್ ನಲ್ಲಿ ಸಂಗ್ರಹವಾಗುವ ಮಳೆ ನೀರಿನಲ್ಲಿ ಈಡಿಸ್ ಸೊಳ್ಳೆಗಳು ಯಥೇಚ್ಛವಾಗಿ ಬೆಳೆಯುತ್ತವೆ.
ಈಡಿಸ್ ಸೊಳ್ಳೆಯ ಕಡಿತದಿಂದ ರಕ್ಷಿಸಿಕೊಳ್ಳಲು ಶಾಲೆಯಲ್ಲಿರುವ ಶಿಕ್ಷಕರು,ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ, ಈ ಕೆಳಕಂಡ ಸ್ವಯಂ ರಕ್ಷಣಾ ವಿಧಾನಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳುವುದರೊಂದಿಗೆ ಶಾಲೆಯ ಆವರಣವನ್ನು “ಈಡಿಸ್ ಸೊಳೆ ರಹಿತ ಆವರಣ” ಎಂದು ಖಚಿತಪಡಿಸಿಕೊಳ್ಳಲು ಸೂಚಿಸಿದೆ.
1. ಕೈ-ಕಾಲು ಮುಚ್ಚುವಂತಹ ಸಮವಸ್ತ್ರ / ಬಟ್ಟೆಗಳನ್ನು (full sleeved tops/shirts & pants/ leggings) ಧರಿಸುವುದು.
2. ಶಾಲೆಗೆ ಬರುವ ಮುನ್ನ Mosquito repellent ಗಳನ್ನು ಕೈ-ಕಾಲುಗಳಿಗೆ ಹಚ್ಚಿಕೊಳ್ಳುವುದು.
3. ಡೆಂಗೂ ನಿಯಂತ್ರಣ ಕ್ರಮಗಳ ಕುರಿತ Do’s & Don’t’s ಶಾಲೆಯ / ಶಾಲಾ ಕೊಠಡಿಯ ನೋಟಿಸ್ ಬೋರ್ಡ್ ಗಳಲ್ಲಿ ಪುದರ್ಶಿಸುವುದು
4. ಶುದ್ಧ ನೀರಿನ ಸಂಗ್ರಹಣಾ ಪರಿಕರಗಳನ್ನು ಭದ್ರವಾಗಿ ಮುಚ್ಚುವುದು ಹಾಗೂ ಕಡ್ಡಾಯವಾಗಿ ವಾರಕ್ಕೊಮ್ಮೆ ಉಜ್ಜಿ ತೊಳೆದು ಸ್ವಚ್ಛಗೊಳಿಸಿ. ನಂತರ ನೀರನ್ನು ತುಂಬಿಸುವುದು.
5. ಘನತ್ಯಾಜ್ಯ ವಸ್ತುಗಳಲ್ಲಿ ಮಳೆ ನೀರು ಸಂಗ್ರಹವಾಗದಂತೆ ಕಡ್ಡಾಯವಾಗಿ ಶೀಘ್ರ ವಿಲೇವಾರಿ ಮಾಡುವುದು.
6. ಶಾಲಾ ಆವರಣದ ಕಟ್ಟಡಗಳ ಟೆರಸ್‌ನ ಮೇಲೆ ಬೀಳುವ ಮಳೆನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮವಹಿಸುವುದು.
7. ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಮಾಹಿತಿಯನ್ನು ಬೆಳಗಿನ ಪ್ರಾರ್ಥನಾ ಸಮಯದಲ್ಲಿ ಪುಚುರಪಡಿಸುವುದು.
8. ಪೋಷಕರ ಸಭೆಗಳಲ್ಲಿ ಡೆಂಗ್ಯೂ ಜ್ವರ ನಿಯಂತ್ರಣ ಕುರಿತು ಅರಿವು ಮೂಡಿಸುವುದರೊಂದಿಗೆ ಪೋಷಕರ WhatsApp Group ಗಳಲ್ಲಿ ಮಾಹಿತಿ ಹಂಚಿಕೊಳ್ಳುವುದು.
9. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಎಸ್.ಡಿ.ಎಂ.ಸಿ ಸಹಕಾರದೊಂದಿಗೆ ಸೂಳ್ಳ ನಿರೋಧಕ (mosquito repellent) ಗಳನ್ನು ವಿದ್ಯಾರ್ಥಿಗಳಿಗೆ ಆದ್ಯತೆಯ ಮೇಲೆ ಪೂರೈಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವುದು.
10. ಶಾಲೆಯ ಅಕ್ಕ-ಪಕ್ಕದಲ್ಲಿರುವ ಖಾಲಿ ನಿವೇಶನಗಳಲ್ಲಿ ಘನತ್ಯಾಜ್ಯ ವಸ್ತುಗಳು ಸಂಗ್ರಹವಾಗದಂತ ಕ್ರಮವಹಿಸುವುದು. ಅಗತ್ಯವಿದ್ದಲ್ಲಿ ಪಂಚಾಯಿತಿ ವತಿಯಿಂದ ಅಗತ್ಯ ಸಹಕಾರ ಪಡೆಯುವುದು.
ಮೇಲ್ಕಂಡ ಎಲ್ಲಾ ಅಂಶಗಳನ್ನು ಕಟ್ಟನಿಟ್ಟಾಗಿ ಪಾಲಿಸುವುದರೊಂದಿಗೆ ಇಂತಹ ರೋಗಗಳಿಂದ ಯಾವುದೇ ವಿದ್ಯಾರ್ಥಿ ಅಥವಾ ವಿದ್ಯಾರ್ಥಿಗಳಿಗೆ ಇಂತಹ ಯಾವುದೇ ತೊಂದರೆ ಆಗದಂತ ಅಗತ್ಯ ಮುನ್ನೆಚ್ಚರಿಕಾ ಹಾಗೂ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡು ಶಾಲೆಗಳನ್ನು ನಡೆಸಿಕೊಂಡು ಹೋಗುವಂತೆ ಈ ಮೂಲಕ ಮತ್ತೊಮ್ಮೆ ಸೂಚಿಸಿದ.
ಕುರಿತು
ಈ ಸಂಬಂಧ ಉಲ್ಲೇಖ-01 & 02 ರಲ್ಲಿನ ಅಂಶಗಳನ್ನು ಅನುಪಾಲಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಲು ನಿಯಮಾನುಸಾರ ಅಗತ್ಯ ಕ್ರಮಗಳನ್ನು ವಹಿಸತಕ್ಕದ್ದು, ಈ ಸಮುದಾಯದ, ಸ್ಥಳೀಯ ಆರೋಗ್ಯ ಇಲಾಖೆ, ಸ್ಥಳೀಯ ಸಂಸ್ಥೆಗಳ ಮತ್ತು ತಾಲ್ಲೂಕು ಮತ್ತು ಜಿಲ್ಲಾಡಳಿತಗಳ ಸಹಕಾರ ಹಾಗೂ ಮಾರ್ಗದರ್ಶನದೊಂದಿಗೆ ಅಗತ್ಯ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳುವುದು. ಮುಂದುವರೆದು, ಇಂತಹ ಸನ್ನಿವೇಶಗಳಲ್ಲಿ ಮೇಲ್ಕಂಡ ನಿರ್ದೇಶನಗಳೊಂದಿಗೆ ಸರ್ಕಾರ, ಆರೋಗ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಂಬಂಧಿಸಿದ ಇಲಾಖೆಗಳು, ಆಯಾ ಜಿಲ್ಲಾಡಳಿತಗಳು ಮತ್ತು ಸ್ಥಳೀಯ ಸಂಸ್ಥೆಗಳು ಕಾಲ-ಕಾಲಕ್ಕೆ ನೀಡುವ ಸೂಚನೆಗಳನ್ನು ಹಾಗೂ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸುವಂತೆ ಸಂಬಂಧಿಸಿದ ಇಲಾಖಾಧಿಕಾರಿಗಳಿಗೆ ಮತ್ತು ರಾಜ್ಯದ ಎಲ್ಲಾ ಶಾಲೆಗಳ ಮುಖ್ಯ ಶಿಕ್ಷಕರಿಗೆ ಈ ಮೂಲಕ ತಿಳಿಸಲಾಗಿದೆ.