ಬೆಳಗಾವಿ: ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಅಕ್ರಮವಾಗಿ ಜಾನುವಾರು ಸಾಗಿಸುತ್ತಿದ್ದಂತ ಕ್ಯಾಂಟರ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ, ಮೂರು ಕರುಗಳು ಸ್ಥಳದಲ್ಲೇ ಸಾವನ್ನಪ್ಪಿ, ಎರಡು ಗೋವುಗಳು ಗಂಭೀರವಾಗಿ ಗಾಯಗೊಂಡಿರುವಂತ ಘಟನೆ ನಡೆದಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಚಿಕ್ಕಬಾಗೇವಾಡಿ ಗ್ರಾಮದ ಬಳಿಯಲ್ಲಿ ಕ್ಯಾಂಟರ್ ಒಂದು ಪಲ್ಟಿಯಾಗಿದೆ. ಈ ಕಾರಣದಿಂದ ಅದರಲ್ಲಿದ್ದಂತ ಜಾನುವಾರುಗಳು ಗಾಯಗೊಂಡಿದ್ದವು.
ಕ್ಯಾಂಟರ್ ಪಲ್ಟಿಯಿಂದಾಗಿ ಸ್ಥಳದಲ್ಲೇ ಮೂರು ಕರುಗಳು ಸಾವನ್ನಪ್ಪಿದ್ರೇ, ಎರಡು ಗೋವುಗಳು ಗಂಭೀರವಾಗಿ ಗಾಯಗೊಂಡಿದ್ದಾವೆ. ಕ್ಯಾಂಟರ್ ಪಲ್ಟಿಯಾದ ನಂತ್ರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಇನ್ನೂ ಗಾಯಗೊಂಡಿದ್ದಂತ ಜಾನುವಾರುಗಳನ್ನು ಹಿಂದೂ ಕಾರ್ಯಕರ್ತರು ರಕ್ಷಿಸಿ, ಸಮೀಪದ ಪಶು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಅಲ್ಲದೇ 9 ಗೋವುಗಳನ್ನು ಇಂಚುಲ ಗೋಶಾಲೆಗೆ ರವಾನಿಸಲಾಗಿದೆ. ಈ ವಿಷಯ ತಿಳಿದಂತ ಬೈಲಹೊಂಗಲ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
2036ರ ಒಲಿಂಪಿಕ್ಸ್‌ಗೆ ಭಾರತ ಸಿದ್ಧತೆ: ಕೆಂಪುಕೋಟೆಯಿಂದ ಪ್ರಧಾನಿ ಮೋದಿ ಘೋಷಣೆ
BIGG NEWS: ‘KPTCL 226 ಜೆಇ ವರ್ಗಾವಣೆ’ಯಲ್ಲಿ ಮತ್ತೊಂದು ಕರ್ಮಕಾಂಡ: ಪುಲ್ ‘ಡೀಲ್ ಮಗಾ’ ಡೀಲ್