ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಡೆಂಗ್ಯೂ ಬೆನ್ನಲ್ಲೇ ಇದೀಗ ವೈರಲ್ ಜ್ವರದ ಆತಂಕ ಶುರುವಾಗಿದ್ದು, ಮಕ್ಕಳಿಂದ ಹಿಡಿದು ವೃದ್ಧರವರೆಗೂ ವೈರಲ್ ಜ್ವರ ಕಾಡುತ್ತಿದೆ.
ಬೆಂಗಳೂರಿನಲ್ಲಿ ಮಳೆಯ ಜೊತೆಗೆ ಬಿಸಿಲು ಹಾಗೂ ಚಳಿ ಕೂಡ ಇದ್ದು, ಜನರ ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಕುಟುಂಬದ ಸದಸ್ಯನೊಬ್ಬನಿಗೆ ಕಾಣಿಸಿಕೊಂಡ ವೈರಲ್ ಜ್ವರ ಬಳಿಕ ಒಬ್ಬರಿಂದ ಒಬ್ಬರಿಗೆ ಹರಡುತ್ತಿದೆ.
ವಿಪರೀತ ಚಳಿ ಜ್ವರ, ನೆಗಡಿ, ಕೆಮ್ಮು, ತಲೆ ನೋವು, ಮೈ ಕೈ ನೋವು, ಸ್ನಾಯು ಸೆಳೆತ, ಗಂಟುಲುಗಳಲ್ಲಿ ನೋವು ವಾಂತಿ ಭೇದಿ, ಹೊಟ್ಟೆ ನೋವು, ಕಣ್ಣುಗಳಲ್ಲಿ ನೀರು ಸೋರಿಕೆ ಹಾಗೂ ಕಣ್ಣು ಕೆಂಪಾಗುವುದು ವೈರಲ್ ಫೀವರ್ ನ ಲಕ್ಷಣಗಳಾಗಿವೆ.