ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ಮುಂಭಾಗದ ಸಮೀಪವೇ ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿ ಕ್ಷಣ ಮಾತ್ರದಲ್ಲಿ ಇತರೆಡೆಗೆ ಆವರಿಸಿದ್ದರಿಂದ, ಹೊತ್ತಿ ಉರಿದಿರುವುದಾಗಿ ತಿಳಿದು ಬಂದಿದೆ.
ಬೆಂಗಳೂರಿನ ವಿಧಾನಸೌಧದ ಸಮೀಪ ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ ಹಚ್ಚಲಾಗಿದೆ. ಮಾಲೀಕನೇ ತನ್ನ ಬೈಕ್ ಅನ್ನು ವಿಧಾನಸೌಧದ ಮುಂಭಾಗದಲ್ಲಿ ನಿಲ್ಲಿಸಿ ಬೆಂಕಿ ಇಟ್ಟಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಎಲೆಕ್ಟ್ರಿಕ್ ಬೈಕ್ ನ ಬಾಕಿ ಹಣ ಪಾವತಿ ಆಗದೇ ಇದ್ದ ಕಾರಣಕ್ಕೆ ಸಿಟ್ಟಿನಿಂದ ವಿಧಾನಸೌಧದ ಸಮೀಪವೇ ಬೆಂಕಿ ಹಚ್ಚಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಆಗಮಿಸಿದಂತ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈ ಘಟನೆಯ ಕುರಿತಂತೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
BREAKING: ಟೀಂ ಇಂಡಿಯಾ ಬೌಲಿಂಗ್ ಕೋಚ್ ಆಗಿ ಮಾರ್ನೆ ಮಾರ್ಕೆಲ್ ನೇಮಕ: ವರದಿ | Morne Morkel
ರಾಜ್ಯದ ರೈತರೇ ಗಮನಿಸಿ : ‘PM KISAN’ ಹಣ ಜಮಾ ಆಗಲು ಕೂಡಲೇ `e-KYC’ ಮಾಡಿಸಿಕೊಳ್ಳಿ!