ಬೆಂಗಳೂರು : ಪಿ.ಎಂ.ಕಿಸಾನ್ ಯೋಜನೆಯಡಿ ರೈತ ಬಂಧುಗಳು ಆರ್ಥಿಕ ನೆರವು ಪಡೆಯಲು e-KYC ಕಡ್ಡಾಯಗೊಳಿಸಲಾಗಿದೆ. e-KYC ಮಾಡಿಸಲು ಬಾಕಿ ಇರುವ ರೈತರು ಕೂಡಲೇ e-KYC ಮಾಡಿಸಿಕೊಳ್ಳಲು ಕೋರಿದೆ.
ಪಿಎಂ ಕಿಸಾನ್ ಯೋಜನೆಯ 18 ನೇ ಕಂತನ್ನು ಪಡೆಯಲು ನೀವು ಈ ಕೆವೈಸಿಯನ್ನು ಮಾಡಿಸಿಕೊಳ್ಳಬೇಕು. ನೀವು ಇನ್ನೂ ಈ KYC ಯನ್ನು ಪೂರ್ಣಗೊಳಿಸದಿದ್ದರೆ, ನೀವು ಮೊದಲು ಈ KYC ಯನ್ನು ಪೂರ್ಣಗೊಳಿಸಬೇಕು. ಇಲ್ಲದಿದ್ದರೆ, ಈ 18 ನೇ ಕಂತು ಸಂಪೂರ್ಣವಾಗಿ ರದ್ದುಗೊಳ್ಳುತ್ತದೆ.
ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದರೆ ನೀವು ಪಿಎಂ ಕಿಸಾನ್ ಯೋಜನೆಯ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಮೊದಲು ಬ್ಯಾಂಕಿಗೆ ಹೋಗಿ ನಿಮ್ಮ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಅನ್ನು ಲಿಂಕ್ ಮಾಡಿ.
ಈ ಸಂಖ್ಯೆಗಳ ಸಹಾಯ ಪಡೆಯಿರಿ.!
ಕಿಸಾನ್ ಯೋಜನೆಗೆ ಸಂಬಂಧಿಸಿದ ನವೀಕರಣಗಳಿಗಾಗಿ, ನೀವು ಅಧಿಕೃತ ಸೈಟ್ pmkisan.gov.inನ ಸಹಾಯವನ್ನ ತೆಗೆದುಕೊಳ್ಳಬಹುದು. ರೈತ ಸಹೋದರರು ಹತ್ತಿರದ ಸಿಎಸ್‌ಸಿ ಕೇಂದ್ರಕ್ಕೆ ಹೋಗಿ ಇ-ಕೆವೈಸಿ ಮಾಡಬಹುದು. ರೈತ ಬಂಧುಗಳು ಯಾವುದೇ ಸಮಸ್ಯೆ ಎದುರಿಸುತ್ತಿದ್ದರೆ ಅವ್ರು ಸಹಾಯವಾಣಿ ಸಂಖ್ಯೆ 155261 ಗೆ ಸಹಾಯ ಮಾಡಬಹುದು. ಯೋಜನೆಗೆ ಸಂಬಂಧಿಸಿದ ವಿವರಗಳನ್ನ ತಿಳಿಯಲು, ರೈತರು 1800115526 ಸಂಪರ್ಕಿಸಬಹುದು.