ನವದೆಹಲಿ : ಭಾರತೀಯ ರೈಲ್ವೇ ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ ನೀಡಿದ್ದು, ಬೃಹತ್ ಉದ್ಯೋಗಗಳ ಭರ್ತಿಗೆ ಅಧಿಸೂಚನೆಯನ್ನ ಬಿಡುಗಡೆ ಮಾಡಲು ಸಿದ್ಧವಾಗಿದೆ.
ಭಾರತೀಯ ರೈಲ್ವೆಯು ಟಿಕೆಟ್ ಕಲೆಕ್ಟರ್ (TC) ಉದ್ಯೋಗಗಳಿಗೆ ನೇಮಕಾತಿ ಪ್ರಕ್ರಿಯೆಯನ್ನ ಪ್ರಾರಂಭಿಸಲಿದೆ. ರೈಲ್ವೆ ನೇಮಕಾತಿ ಮಂಡಳಿ (RRB) 11,250 ಹುದ್ದೆಗಳನ್ನ ಭರ್ತಿ ಮಾಡಲು ಅಧಿಸೂಚನೆಯನ್ನ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದರಿಂದಾಗಿ ರೈಲ್ವೇ ಉದ್ಯೋಗಕ್ಕೆ ತಯಾರಿ ನಡೆಸುತ್ತಿರುವ ಯುವಕರು ಹಾಗೂ ಇತರೆ ನಿರುದ್ಯೋಗಿಗಳು ಕೂಡ ಈ ಉದ್ಯೋಗ ಪಡೆಯಲು ತೀವ್ರ ಪ್ರಯತ್ನ ಆರಂಭಿಸಿದ್ದಾರೆ.
ಈ ತಿಂಗಳಲ್ಲೇ ಈ ಟಿಸಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಬೀಳುವ ಸಾಧ್ಯತೆ ಇದೆ. ಮುಂದಿನ ತಿಂಗಳು ಸೆಪ್ಟೆಂಬರ್‌ನಲ್ಲಿ ಉದ್ಯೋಗ ಭರ್ತಿ ಪ್ರಕ್ರಿಯೆ ಆರಂಭವಾಗಲಿದ್ದು, ಕಾರಣಾಂತರಗಳಿಂದ ವಿಳಂಬವಾಗಿದೆ. ಅಧಿಸೂಚನೆ ವಿವರಗಳಿಗಾಗಿ ರೈಲ್ವೆ ನೇಮಕಾತಿ ಮಂಡಳಿಯ indianrailways.gov.in ನ ಅಧಿಕೃತ ವೆಬ್‌ಸೈಟ್ ಪರಿಶೀಲಿಸುತ್ತಿರಿ.
ಅರ್ಹತೆಗಳು.!
ರೈಲ್ವೆ TC ಉದ್ಯೋಗಗಳಿಗೆ ಪ್ರಯತ್ನಿಸುವ ಅಭ್ಯರ್ಥಿಗಳು 18 ರಿಂದ 30 ವರ್ಷಗಳ ನಡುವೆ ಇರಬೇಕು. ಆದರೆ SC, ST, OBC ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇದೆ. ವಯೋಮಿತಿ ವಿವರಗಳನ್ನ ಅಧಿಸೂಚನೆಯಲ್ಲಿ ನಮೂದಿಸಲಾಗುವುದು.
ಭಾರತೀಯರು ಮತ್ತು ನಿಗದಿತ ವಯಸ್ಸು ಮತ್ತು ಶೈಕ್ಷಣಿಕ ಅರ್ಹತೆಗಳನ್ನ ಹೊಂದಿರುವವರು ಈ ರೈಲ್ವೇ ಟಿಸಿ ಹುದ್ದೆಗಳಿಗೆ ಅರ್ಹರಾಗಿರುತ್ತಾರೆ. ಇಂಟರ್ ಮೀಡಿಯೇಟ್ ಅಥವಾ ಪದವಿ ವಿದ್ಯಾರ್ಹತೆ ಹೊಂದಿರಬೇಕು. ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆಯಲ್ಲಿ ಶೈಕ್ಷಣಿಕ ಅರ್ಹತೆಗಳನ್ನ ಸಹ ಉಲ್ಲೇಖಿಸುತ್ತದೆ.
ರೈಲ್ವೇಯಲ್ಲಿ TC ಉದ್ಯೋಗಗಳಿಗೆ ಅಭ್ಯರ್ಥಿಗಳ ಭೌತಿಕ ಮಾನದಂಡಗಳನ್ನ ಸಹ ಪರಿಶೀಲಿಸಲಾಗುತ್ತದೆ. ಇದರರ್ಥ ನಿರ್ದಿಷ್ಟ ಎತ್ತರವನ್ನ ಹೊಂದಿರುವುದು ಮತ್ತು ದೃಷ್ಟಿಹೀನತೆ ಇಲ್ಲದಿರುವುದು. ಇದಕ್ಕಾಗಿ ಅಭ್ಯರ್ಥಿಗಳಿಗೆ ವೈದ್ಯಕೀಯ ಪರೀಕ್ಷೆಯೂ ಇರುತ್ತದೆ. ಈ ಎಲ್ಲಾ ಅರ್ಹತೆಗಳನ್ನು ಹೊಂದಿರುವ ಅಭ್ಯರ್ಥಿಗಳು ರೈಲ್ವೆ ಟಿಕೆಟ್ ಕಲೆಕ್ಟರ್ ಹುದ್ದೆಯನ್ನು ಪಡೆಯಬಹುದು. ಒಮ್ಮೆ ಕೆಲಸಕ್ಕೆ ಸೇರಿದರೆ ಮಾಸಿಕ 35,000 ಸಂಬಳ ಪಡೆಯಬಹುದು. ಅಂದ್ಹಾಗೆ, ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದ ಅಧಿಸೂಚನೆಯಲ್ಲಿ ಸಂಪೂರ್ಣ ವಿವರಗಳನ್ನ ತಿಳಿಯಲಾಗುವುದು.
2036ರ ವೇಳೆಗೆ ಭಾರತದ ಜನಸಂಖ್ಯೆ 152.2 ಕೋಟಿಗೆ ಏರಿಕೆ : ಕೇಂದ್ರ ಸರ್ಕಾರ
BIG NEWS: ‘KPTCL ಕಿರಿಯ ಇಂಜಿನಿಯರ್’ ವರ್ಗಾವಣೆಯಲ್ಲಿ ‘ಮಹಾ ಎಡವಟ್ಟು’: ಒಂದೇ ಹುದ್ದೆಗೆ ‘7 ಜೆಇ’ ನೇಮಕ
‘ಲಷ್ಕರ್ ಉಗ್ರ’ನೊಂದಿಗೆ ಒಲಿಂಪಿಕ್ ಚಾಂಪಿಯನ್ ‘ಅರ್ಷದ್ ನದೀಮ್’ ಸಂಭಾಷಣೆ ವಿಡಿಯೋ ವೈರಲ್