ಇಸ್ಲಾಮಾಬಾದ್ : ವಸತಿ ಯೋಜನೆ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಐಎಸ್ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಫೈಜ್ ಹಮೀದ್’ನನ್ನ ಮಿಲಿಟರಿ ಬಂಧಿಸಿದೆ ಎಂದು ಸೇನೆ ಸೋಮವಾರ ತಿಳಿಸಿದೆ.
“ಪಾಕಿಸ್ತಾನದ ಸುಪ್ರೀಂ ಕೋರ್ಟ್ನ ಆದೇಶಗಳಿಗೆ ಅನುಸಾರವಾಗಿ, ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ (ನಿವೃತ್ತ) ವಿರುದ್ಧ ಮಾಡಲಾದ ಟಾಪ್ ಸಿಟಿ ಪ್ರಕರಣದಲ್ಲಿನ ದೂರುಗಳ ನಿಖರತೆಯನ್ನ ಕಂಡುಹಿಡಿಯಲು ಪಾಕಿಸ್ತಾನ ಸೇನೆಯು ವಿವರವಾದ ವಿಚಾರಣೆಯನ್ನ ಕೈಗೊಂಡಿದೆ” ಎಂದು ಸೇನೆಯ ಮಾಧ್ಯಮ ವಿಭಾಗವಾದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಶನ್ಸ್ (ISPR) ಹೇಳಿಕೆಯಲ್ಲಿ ತಿಳಿಸಿದೆ.
ಇದರ ಪರಿಣಾಮವಾಗಿ, ಪಾಕಿಸ್ತಾನ ಸೇನಾ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಲೆಫ್ಟಿನೆಂಟ್ ಜನರಲ್ ಫೈಜ್ ಹಮೀದ್ (ನಿವೃತ್ತ) ವಿರುದ್ಧ ಸೂಕ್ತ ಶಿಸ್ತು ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಅದು ಹೇಳಿದೆ.
ಇಂಟರ್ ಸರ್ವೀಸಸ್ ಇಂಟೆಲಿಜೆನ್ಸ್ (ISI) ಮುಖ್ಯಸ್ಥನ ವಿರುದ್ಧ ಅಧಿಕಾರ ದುರುಪಯೋಗದ ಆರೋಪದ ಬಗ್ಗೆ ತನಿಖೆ ನಡೆಸಲು ಮಿಲಿಟರಿ ಏಪ್ರಿಲ್ನಲ್ಲಿ ವಿಚಾರಣಾ ಸಮಿತಿಯನ್ನ ರಚಿಸಿತ್ತು ಎಂದು ವರದಿಯಾಗಿದೆ.
BREAKING : ಜುಲೈನಲ್ಲಿ ‘ಚಿಲ್ಲರೆ ಹಣದುಬ್ಬರ’ ಶೇ.3.54ಕ್ಕೆ ಇಳಿಕೆ, 5 ವರ್ಷಗಳ ಕನಿಷ್ಠ ಮಟ್ಟಕ್ಕೆ
ಶಿವಮೊಗ್ಗ : ಬಂಧಿಸಲು ಹೋಗಿದ್ದಾಗ ಪೋಲೀಸರ ಮೇಲೆ ಹಲ್ಲೆ : ರೌಡಿ ಶೀಟರ್ ಗೆ ಗುಂಡು ಹಾರಿಸಿದ ‘PSI’
Viral Video : ಫುಟ್ಬಾಲ್ ಪಂದ್ಯ ಸೋತ ಮಕ್ಕಳನ್ನ ಮನಬಂದಂತೆ ಥಳಿಸಿದ ದೈಹಿಕ ಶಿಕ್ಷಕ, ವಿಡಿಯೋ ವೈರಲ್