ವಿಜಯನಗರ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಫೋಟೋವನ್ನು ದೇವರ ಮುಂದಿರಿಸಿ ಪೂಜೆ ಮಾಡಿದ್ದಕ್ಕೆ ಮತ್ತೊಬ್ಬ ಅರ್ಚಕನನ್ನು ಅಮಾನತುಗೊಳಿಸಲಾಗಿದೆ.
ಬಳ್ಳಾರಿ ಜಿಲ್ಲೆಯಲ್ಲಿ ಕೆಲ ದಿನಗಳ ಹಿಂದೆಯಷ್ಟೇ ನಟ ದರ್ಶನ್ ಫೋಟೋವನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿದ್ದ ಅರ್ಚಕರನ್ನು ಅಮಾನತುಗೊಳಿಸಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ಅರ್ಚಕ ದೇವರ ಮುಂದೆ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿರುವ ಘಟನೆ ನಡೆದಿಎ.
ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ಬಸವೇಶ್ವರ ದೇವಸ್ಥಾನದ ಬಸಪ್ಪ ತೋಟಪ್ಪ ಪೂಜಾರ ಅಮಾನತುಗೊಂಡ ಅರ್ಚಕ. ಈತ ಇತ್ತೀಚಿಗೆ ಬಸವೇಶ್ವರ ದೇವರ ಮೇಲೆ ದರ್ಶನ್ ಫೋಟೋ ಇಟ್ಟು ಪೂಜೆ ಮಾಡಿದ್ದ. ಈ ಹಿನ್ನೆಲೆಯಲ್ಲಿ ಬಸಪ್ಪನಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ನೋಟಿಸ್ ಜಾರಿ ಮಾಡಿ ಅಮಾನತುಗೊಳಿಸಲಾಗಿದೆ.