ನವದೆಹಲಿ: ಭಾರತದಲ್ಲೂ ಬಾಂಗ್ಲಾದೇಶದಂತೆ ರಾಜಕೀಯ ಅಸ್ತಿರತೆ, ಹಿಂಸಾಚಾರದಂತ ಘಟನೆಗಳು ಉದ್ಭವಿಸಬಹುದು ಎನ್ನಲಾಗುತ್ತಿತ್ತು. ಆದರೇ ರಾಷ್ಟ್ರವನ್ನು ಅಸ್ಥಿರಗೊಳಿಸುವ ಗುರಿಯನ್ನು ಹೊಂದಿರುವ ವಿದೇಶಿ ಹಸ್ತಕ್ಷೇಪಗಳನ್ನು ತಡೆಯುವಲ್ಲಿ ಭಾರತ ಮುಂಜಾಗ್ರತ ಕ್ರಮವಹಿಸಿದೆ. ಹೀಗಾಗಿ ಬಾಂಗ್ಲಾದಂತಹ ಪರಿಸ್ಥಿತಿಯನ್ನು ತಡೆಯುವಲ್ಲಿ ಯಶಸ್ವಿಯಾಗಲಿದೆ. ಅದು ಹೇಗೆ ಎನ್ನುವ ಪುಲ್ ಡೀಟೆಲ್ಸ್ ಮುಂದೆ ಓದಿ.
ನೆರೆಯ ಬಾಂಗ್ಲಾದೇಶದಲ್ಲಿ ಅಶಾಂತಿ ಉಂಟಾಗಿ, ಪ್ರಧಾನಿ ಸ್ಥಾನಕ್ಕೂ ಶೇಖ್ ಹಸೀನಾ ರಾಜೀನಾಮೆ ನೀಡಿ, ದೇಶವನ್ನೇ ತೊರೆದು ಹೋಗಿದ್ದಾರೆ. ಈ ಮಾದರಿಯಲ್ಲೇ ಭಾರತದಲ್ಲೂ ಅಶಾಂತಿಗೆ ವಿದೇಶದ ಬಾಹ್ಯ ಶಕ್ತಿಗಳು ಪ್ರಚೋದನೆಯ ಯತ್ನವು ನಡೆದಿತ್ತು. ಆದರೇ ಪ್ರಧಾನಿ ಮೋದಿ ನೇತೃತ್ವದ ಭಾರತ ಸರ್ಕಾರವು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳುವ ಮೂಲಕ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸುರಕ್ಷಿತ ತಾಣವಾಗಿ ಉಳಿಯುವಂತೆ ಮಾಡಿದೆ.
ಬಾಂಗ್ಲಾದೇಶದಲ್ಲಿ ಅಶಾಂತಿ ತೀವ್ರಗೊಳ್ಳುತ್ತಿದ್ದಂತೇ, ಮುನ್ನೆಚ್ಚರಿಕೆ ವಹಿಸಿದಂತ ಕೇಂದ್ರ ಸರ್ಕಾರವು, ಭಾರತ-ಬಾಂಗ್ಲಾದೇಶದ ಗಡಿಯಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ನಡೆಸಿತು. ಇದಕ್ಕಾಗಿ ಗಡಿ ಭದ್ರತಾ ಪಡೆ( ಬಿಎಸ್ಎಫ್) ಎಡಿಜಿ ಮತ್ತು ಭಾರತೀಯ ಸೇನೆಯ ಪೂರ್ವ ಕಮಾಂಡ್ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಕೇಂದ್ರ ಗೃಹಸಚಿವ ಅಮಿತ್ ಶಾ ಆದೇಶಿಸಿದ್ದರು.
ಇದಷ್ಟೇ ಅಲ್ಲದೇ ಬಾಂಗ್ಲಾದೇಶದಲ್ಲಿನ ಅಶಾಂತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿದ್ದಂತ ಭಾರತೀಯ ಪ್ರಜೆಗಳು, ಹಿಂದೂಗಳು ಮತ್ತು ಇತರೆ ಅಲ್ಪಸಂಖ್ಯಾತ ಸಮುದಾಯಗಳ ಸುರಕ್ಷತೆಯನ್ನು ಖಡಿತಪಡಿಸಿಕೊಳ್ಳಲಾಗಿದೆ. ಇದಕ್ಕಾಗಿ ಬಾಂಗ್ಲಾದೇಶದ ಸಂಬಂಧಿತ ಅಧಿಕಾರಿಗಳೊಂದಿಗೂ ನಿರಂತರ ಸಂಪರ್ಕವನ್ನು ಕೇಂದ್ರ ಗೃಹ ಸಚಿವಾಲಯ ಹೊಂದಿದೆ.
ಬಾಂಗ್ಲಾದೇಶದಲ್ಲಿ ಅಶಾಂತಿ, ಭಾರತ ತಡೆದಿದ್ದೇಗೆ.? ತಜ್ಞರು ಹೇಳೋದೇನು?
ಈ ಬಗ್ಗೆ ಇನ್ಸ್ಟಿಟ್ಯೂಟ್ ಆಫ್ ಪೀಸ್ ಅಂಡ್ ಕಾನ್ಫ್ಲಿಕ್ಟ್ ಸ್ಟಡೀಸ್ (ಐಪಿಸಿಎಸ್) ನ ಹಿರಿಯ ಫೆಲೋ ಅಭಿಜಿತ್ ಅಯ್ಯರ್ ಮಿತ್ರಾ ಮಾತನಾಡಿ, ಭಾರತದ ದೃಢವಾದ ವಿದೇಶಾಂಗ ನೀತಿ ಮತ್ತು ವಿದೇಶಿ ಎನ್ ಜಿಒ ಧನಸಹಾಯದ ಕಠಿಣ ನಿಯಂತ್ರಣವು ಸಂಭಾವ್ಯ ಹಾನಿಯನ್ನು ತಪ್ಪಿಸಲು ಕಾರಣವಾಗಿದೆ ಎಂದು ಹೇಳುತ್ತಾರೆ.
ಒಮಿಡ್ಯಾರ್ ಮತ್ತು ಹಿಂಡೆನ್ಬರ್ಗ್ ನಂತಹ ಗುಂಪುಗಳು ತಮ್ಮ ಪಟ್ಟಭದ್ರ ಹಿತಾಸಕ್ತಿಗಳಿಂದಾಗಿ ಉದ್ದೇಶಪೂರ್ವಕವಾಗಿ ಭಾರತವನ್ನು ಟೀಕಿಸುತ್ತಿವೆ. ಆದರೆ ಕೇಂದ್ರ ಸರ್ಕಾರದ ಬಲವಾದ ನಿಲುವು ಗಮನಾರ್ಹ ಹಾನಿಯನ್ನುಂಟು ಮಾಡುವುದನ್ನು ತಡೆಯುತ್ತಿದೆ ಎಂದು ಅವರು ಎತ್ತಿ ತೋರಿಸುತ್ತಾರೆ.
ಇವರಲ್ಲದೇ ವಿದೇಶಾಂಗ ನೀತಿ ಮತ್ತು ರಾಜಕೀಯ ಅರ್ಥಶಾಸ್ತ್ರದ ತಜ್ಞ ಪ್ರಮಿತ್ ಪಾಲ್ ಚೌಧರಿ, ಬಾಂಗ್ಲಾದೇಶದ ಹಿಂದೂಗಳು 1971 ರಿಂದ ರಾಜಕೀಯ ಮತ್ತು ಧಾರ್ಮಿಕ ಉದ್ದೇಶಗಳೊಂದಿಗೆ ಉದ್ದೇಶಿತ ದಾಳಿಗಳನ್ನು ಎದುರಿಸಿದ್ದಾರೆ ಎಂದು ಗಮನಸೆಳೆದಿದ್ದಾರೆ.
ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ವ್ಯವಸ್ಥಿತವಾಗಿ ಗುರಿಯಾಗಿಸಿಕೊಂಡಿರುವುದು ಮತ್ತು 1971 ರ ನರಮೇಧದ ಸಮಯದಲ್ಲಿ ಪಾಕಿಸ್ತಾನಿ ಸೈನ್ಯವು ಬಳಸಿದ ತಂತ್ರಗಳ ನಡುವೆ ಅವರು ಹೋಲಿಕೆಗಳನ್ನು ತೋರಿಸುತ್ತಾರೆ. ಅಲ್ಲಿ ಬಂಗಾಳಿ ಬೌದ್ಧಿಕ ವರ್ಗವನ್ನು ಉದ್ದೇಶಪೂರ್ವಕವಾಗಿ ನಿರ್ಮೂಲನೆ ಮಾಡಲಾಯಿತು. ಈ ಐತಿಹಾಸಿಕ ಕುಂದುಕೊರತೆಗಳಿಂದ ಪ್ರಚೋದಿಸಲ್ಪಟ್ಟ ಬಾಂಗ್ಲಾದೇಶದಲ್ಲಿ ಇತ್ತೀಚಿನ ಅಶಾಂತಿಯನ್ನು ಹೆಚ್ಚಿಸಿದೆ ಎಂದಿದ್ದಾರೆ.
ಅಂದಹಾಗೇ ಭಾರತದಾಧ್ಯಂತ ಕೃಷಿ ಕಾನೂನುಗಳನ್ನು ವಿರೋಧಿಸಿ ಬಹು ದೊಡ್ಡ ಪ್ರತಿಭಟನೆಗಳೇ ನಡೆದವು. ರಾಷ್ಟ್ರೀಯ ಹೆದ್ದಾರಿಗಳನ್ನು ತಡೆದು, ತಿಂಗಳಾನುಗಟ್ಟಲೆ ರೈತರು ಪ್ರತಿಭಟನೆಯನ್ನು ನಡೆಸಿದರು. ಆದರೇ ಇವುಗಳನ್ನು ಸಮರ್ಥವಾಗಿ ಕೇಂದ್ರ ಸರ್ಕಾರ ನಿಭಾಯಿಸಿತು. ಗ್ರೆಟಾ ಥನ್ಬರ್ಗ್ ಮತ್ತು ರಿಹಾನ್ನಾ ಅವರಂತಹ ಅಂತರರಾಷ್ಟ್ರೀಯ ವ್ಯಕ್ತಿಗಳು ಪ್ರಭಾವ ಬೀರಲು ಪ್ರಯತ್ನಿಸಿದರೂ, ಭಾರತ ಸರ್ಕಾರವು ಸ್ಥಿರವಾಗಿ ಉಳಿಯಿತು. ಬಲವಾಗಿ ಮತ್ತು ಹೆಚ್ಚು ಸ್ಥಿತಿಸ್ಥಾಪಕವಾಗಿ ಹೊರಹೊಮ್ಮಿತು.
ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ, ಭಾರತವು ಜಾಗತಿಕ ಶಕ್ತಿಯಾಗಿ ತನ್ನ ಸ್ಥಾನವನ್ನು ಗಟ್ಟಿಗೊಳಿಸಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯಲು ಮತ್ತು ರಾಷ್ಟ್ರೀಯ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ ಎಂದು ಅನೇಕರು ಒಪ್ಪುತ್ತಾರೆ.
ಒಟ್ಟಾರೆಯಾಗಿ ಭಾರತದಲ್ಲೂ ಬಾಂಗ್ಲಾದೇಶದಂತೆ ಅಶಾಂತಿ ನಡೆಯೋದು ಬಿಲ್ ಖುಲ್ ಸುಳ್ಳು. ಮೋದಿಯವರ ಮುಂದಾಲೋಚನೆಯಲ್ಲಿ ಇವೆಲ್ಲವೂ ನಾಟ್ ಪಾಸಿಬಲ್ ಎಂಬುವುದು ಹಲವು ತಜ್ಞರ ಅಭಿಪ್ರಾಯವಾಗಿದೆ. ಸೋ ಪ್ರಜಾಪ್ರಭುತ್ವ ದೇಶವಾಗಿರುವಂತ ಭಾರತದಲ್ಲಿ ಎಂದಿಗೂ ಅಶಾಂತಿಗೆ ಸಾಧ್ಯವಾಗುವುದಿಲ್ಲವೆಂದೇ ಹೇಳಬಹುದಾಗಿದೆ.
BREAKING: ಹಾಸನದಲ್ಲಿ ಸಿಡಿಲು ಬಡಿದು 12 ಜನರಿಗೆ ಗಾಯ, ಓರ್ವ ಮಹಿಳೆ ಸ್ಥಿತಿ ಗಂಭೀರ
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಟ್: ಡಿಕೆಶಿ ವಿರುದ್ಧ ಆರ್.ಅಶೋಕ್ ಹಿಗ್ಗಾಮುಗ್ಗಾ ವಾಗ್ಧಾಳಿ