ಹಾಸನ: ಜಿಲ್ಲೆಯಲ್ಲಿ ಇಂದು ಮಳೆಯ ಜೊತೆಗೆ ಸಿಡಿಲು ಬಡಿದ ಪರಿಣಾಮ, 12 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ಓರ್ವ ಮಹಿಳೆಯ ಸ್ಥಿತಿ ಗಂಭೀರವಾಗಿರುವುದಾಗಿ ತಿಳಿದು ಬಂದಿದೆ.
ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಕೋರ್ಲಹಳ್ಳಿಯಲ್ಲಿ ಇಂದು ಈ ದುರ್ಘಟನೆ ಸಂಭವಿಸಿದೆ. ಮಳೆಯ ನಡುವೆ ಕೆ.ಬಿ ಚಂದ್ರು ಎಂಬುವರಿಗೆ ಸೇರಿದಂತ ಜಮೀನಿನಲ್ಲಿ ಭತ್ತ ನಾಟಿಯಲ್ಲಿ ತೊಡಗಿದ್ದರು.
ಭತ್ತ ನಾಟಿಯ ವೇಳೆಯಲ್ಲೇ ಸಿಡಿಲು ಬಡಿದ ಪರಿಣಾಮ, ಕೋರ್ಲಗದ್ದೆ ಗ್ರಾಮದ ರೇಣುಕಾ, ಸವಿತಾ, ಸುಮಿತ್ರ, ರೇಣುಕಮ್ಮ, ನೇತ್ರಾ, ನಿರ್ಮಲಾ, ವೀಣಾ, ಅನಿತಾ ಸೇರಿದಂತೆ 15 ಜನರಿಗೆ ಗಾಯವಾಗಿದೆ.
ಇನ್ನೂ ಸಿಡಿಲು ಬಡಿತದಿದ್ದರಿಂದ ಲತಾ ಎಂಬುವರ ಸ್ಥಿತಿ ಗಂಭೀರವಾಗಿದೆ. ಅವರನ್ನು ಸಕಲೇಶಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಸಂಬಂಧ ಬೇಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಚಂದ್ರಗುತ್ತಿ ದೇವಸ್ಥಾನ’ದ ಸರ್ವಾಂಗೀಣ ವಿಕಾಸಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ
BIG UPDATE: ಸಕಲೇಶಪುರ-ಬಾಳ್ಳುಪೇಟೆ ನಡುವೆ ಭೂ ಕುಸಿತ: ಮತ್ತೆ 10 ರೈಲುಗಳ ಸಂಚಾರ ರದ್ದು | South Western Railway