ಬೆಂಗಳೂರು: ನಗರದಲ್ಲಿ ಹೊಟ್ಟೆನೋವು ಅಂತ ಆಸ್ಪತ್ರೆಗೆ ತೆರಳಿದಂತ ಯುವಕನೊಬ್ಬ ಚಿಕಿತ್ಸೆ ಪಡೆದುಕೊಂಡು ವಾಪಾಸ್ ಆಗಿದ್ದನು. ಮನೆಗೆ ಬಂದ ಕೆಲವೇ ಕ್ಷಣಗಳಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ. ಇದು ವೈದ್ಯರ ಎಡವಟ್ಟಿನ ಕಾರಣ ಅಂತ ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನ ಕೂಡಿಗೇನಹಳ್ಳಿ ಠಾಣೆಯ ವ್ಯಾಪ್ತಿಯಲ್ಲಿನ ನಾರಾಯಣ ಆಸ್ಪತ್ರೆಗೆ ರಮೇಶ್ ಎಂಬ ಯುವಕ ಹೊಟ್ಟೆನೋವಿನ ಕಾರಣದಿಂದ ಚಿಕಿತ್ಸೆಗೆ ತೆರಳಿದ್ದನು. ಚಿಕಿತ್ಸೆ ಪಡೆದಿದ್ದಂತ ರಮೇಶ್, ಮನೆಗೆ ಮರಳಿದ್ದರು.
ಯುವಕ ರಮೇಶ್ ಮನೆಗೆ ಮರಳಿದ ನಂತ್ರ ದಿಢೀರ್ ತಲೆ ಸುತ್ತು ಬಂದು ಕುಸಿದು ಬಿದ್ದಿದ್ದನು. ಆತನನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯುತ್ತಿದ್ದಂತ ವೇಳೆಯಲ್ಲಿ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.
ಯುವ ರಮೇಶ್ ಸಾವಿಗೆ ನಾರಾಯಣ ಆಸ್ಪತ್ರೆಯ ವೈದ್ಯರ ಎಡವಟ್ಟು ಕಾರಣ. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ. ಇದೀಗ ಮೃತ ರಮೇಶ್ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
‘ಚಂದ್ರಗುತ್ತಿ ದೇವಸ್ಥಾನ’ದ ಸರ್ವಾಂಗೀಣ ವಿಕಾಸಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಕಟ್: ಡಿಕೆಶಿ ವಿರುದ್ಧ ಆರ್.ಅಶೋಕ್ ಹಿಗ್ಗಾಮುಗ್ಗಾ ವಾಗ್ಧಾಳಿ