ಬೆಂಗಳೂರು: ವಿಜಯನಗರ ಜಿಲ್ಲೆಯ ತುಂಗಭದ್ರಾ ಡ್ಯಾಂನ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವ ಹಿನ್ನಲೆಯಲ್ಲಿ, ಡ್ಯಾಂಗೆ ತೆರಳಿ ಪರಿಶೀಲನೆ ನಡೆಸಲು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಇಂದು ಟಿಬಿ ಡ್ಯಾಂಗೆ ತೆರಳುತ್ತಿದ್ದಾರೆ.
ಈ ಕುರಿತಂತೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಕಚೇರಿಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ಕ್ರೆಸ್ಟ್ ಗೇಟ್ ಮುರಿದಿರುವ ವಿಜಯನಗರದ ತುಂಗಭದ್ರಾ ಜಲಾಶಯಯಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಇಂದು ಮಧ್ಯಾಹ್ನ 12.30 ಭೇಟಿ ನೀಡಲಿದ್ದಾರೆ ಎಂದು ತಿಳಿಸಿದೆ.
ಬೆಂಗಳೂರಿಂದ ಹೆಲಿಕಾಪ್ಟಾರ್ ನಲ್ಲಿ ವಿಜಯನಗರದ ಹೊಸಪೇಟೆಗೆ ತೆರಳಲಿರುವ ಡಿಸಿಎಂ ಅವರು ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಅಧಿಕಾರಿಗಳ ಜತೆ ಸಭೆ ನಡೆಸಲಿದ್ದಾರೆ ಎಂದು ಹೇಳಿದೆ.
‘ಚಂದ್ರಗುತ್ತಿ ದೇವಸ್ಥಾನ’ದ ಸರ್ವಾಂಗೀಣ ವಿಕಾಸಕ್ಕೆ ಕ್ರಮ: ಸಚಿವ ಮಧು ಬಂಗಾರಪ್ಪ
BIG ALERT: ಯುವತಿಯರೇ, ಮಹಿಳೆಯರೇ, ಬೆಂಗಳೂರಲ್ಲಿ ‘ಕಾಫಿ ಶಾಫ್’ಗೆ ಹೋಗ್ತಾ ಇದ್ದೀರಾ.? ಈ ಸುದ್ದಿ ಓದಿ