ಶಿವಮೊಗ್ಗ: ವಿದ್ಯುತ್ ನಿರ್ವಹಣಾ ಕಾಮಗಾರಿಯ ಹಿನ್ನಲೆಯಲ್ಲಿ ದಿನಾಂಕ 11-08-2024ರಂದು ಸೊರಬ ತಾಲ್ಲೂಕಿನ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ದಿನಾಂಕ:11.08.2024 ರಂದು 110/11 ಕೆವಿ ಸೊರಬ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕೆಳಕಂಡ ನೀಡಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದಿದ್ದಾರೆ.
‘ದಿನಾಂಕ:11.08.2024 ರಂದು ಕೆಳಕಂಡ ಫೀಡರ್ಗಳ ತುರ್ತು ನಿರ್ವಹಣಾ ಕಾಮಗಾರಿಯನ್ನು ನಡೆಸಲು ಉದ್ದೇಶಿಸಿರುವುದರಿಂದ, 10/11 ಕೆವಿ ವಿ.ವಿ ಕೇಂದ್ರ ಸೊರಬದಿಂದ ವಿದ್ಯುತ್ ಸರಬರಾಜಾಗುವ ಎಫ್-21 ಸೊರಬ ಪಟ್ಟಣ ಸೇರಿದಂತೆ ಎಫ್2 ಸಾರೇಕೊಪ್ಪ, ಎಫ್-3 ಬಳ್ಳಬೈಲು, ಎಫ್ ಓಟೂರು, ಎಫ್ ಚಿಕ್ಲಾವಲ, ಎಫ್9 ಒಳಾಗಿ, ಎಫ್-11 ಮಂಟಿ, ಎಫ್15 ಕಲ್ಲಂಬ ಎನ್ಜೆವೈ, ಎಫ್-16 ಕಸೂರು ಎಸ್ವೈ, ಎಫ್17 ಯಲವ, ಎನ್ಟಿಮೈ ಎಫ್-23 ತಾವರೆಹಳ್ಳಿ, ಎಫ್-24 ಕಕ್ಕರಸಿ, ಎಫ್-25 ನಡಹಳ್ಳಿ ಹಾಗೂ ಎಫ್26 ಸೊರಬ ಇಂಡಸ್ಟ್ರೀಯಲ್ ಫೀಡಲ್ಗಳ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳಿಗೆ ಬೆಳಗ್ಗೆ 10:00 ರಿಂದ ಸಂಜೆ 5:00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು