ಶಿವಮೊಗ್ಗ: ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿ ಕೆಲ ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ ಆಗಸ್ಟ್.11ರ ಭಾನುವಾರದಂದು ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮೆಸ್ಕಾಂನ ಸಾಗರ ತಾಲ್ಲೂಕು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಅವರು ಮಾಹಿತಿ ಬಿಡುಗಡೆ ಮಾಡಿದ್ದು, ದಿನಾಂಕ: 11.08.2024 ರ ಭಾನುವಾರದಂದು 110/33/11 ಕೆ.ವಿ ಸಾಗರ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಂಡಿದ್ದು ಸದರಿ ದಿನಾಂಕ 11.08.2024 ರಂದು ಸಾಗರ ಪಟ್ಟಣದ ಈ ಕೆಳಗಿನ ವ್ಯಾಪ್ತಿಯಲ್ಲಿ ಪವರ್ ಕಟ್ ಆಗಲಿದೆ ಅಂತ ತಿಳಿಸಿದೆ.
ಆ.11ರಂದು ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಎಫ್-1 ಸಾಗರ ಟೌನ್, ಎನ್-7 ಮಂಗಳಬೀಸು ಇಂಡಸ್ಟ್ರಿಯಲ್ ಏರಿಯಾ, ಎಫ್-8 ಮಾರಿಕಾಂಬ, ಎಫ್-15 ಆರ್.ಎಂ.ಸಿ, ಎಫ್-17 ಎಸ್.ಎನ್.ನಗರ ಮತ್ತು ಗ್ರಾಮೀಣ ವ್ಯಾಪ್ತಿಯ ಎಫ್-2 ಮಾಲ್ವೆ, ಎಫ್-3 ಹೆಗ್ಗೋಡು, ಎಫ್-4 ಆವಿನಹಳ್ಳಿ, ಎಫ್-5 ವರದಹಳ್ಳಿ, ಎಫ್-6 ಬೊಮ್ಮತ್ತಿ, ಎಫ್-9 ಮಾಸೂರು, ಎಫ್-14 ಹಿರೇನೆಲ್ಲೂರು ಹಾಗೂ ಎಫ್-16 ಲಿಂಗದಹಳ್ಳಿ ಮಾರ್ಗದದಿಂದ ವಿದ್ಯುತ್ ಸಂಪರ್ಕ ಪಡೆದಿರುವ ಸಾಗರ ಪಟ್ಟಣ, ಆವಿನಹಳ್ಳಿ, ಹೆಗ್ಗೋಡು, ಭೀಮನಕೋಣೆ, ಯಡಜಿಗಳಮನೆ, ಕಲ್ಕನೆ, ಮಾಲ್ವೆ, ಭೀಮನೇರಿ, ಕೆಳದಿ, ಮಾಸೂರು, ಹಿರೇನೆಲ್ಲೂರು, ಪಡವಗೋಡು, ನಾಡಕಲಸಿ ಮತ್ತು ಇತರೆ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಎಲ್ಲಾ ಗ್ರಾಮಗಳಲ್ಲಿ ಕರೆಂಟ್ ಇರೋದಿಲ್ಲ.
ಎಷ್ಟೊಂತ್ತಿಂದ ಎಷ್ಟೊತ್ತಿನವರೆಗೆ ಕರೆಂಟ್ ಇರೋದಿಲ್ಲ.?
ದಿನಾಂಕ 11-08-2024ರ ಭಾನುವಾರದಂದು ಬೆಳಗ್ಗೆ: 10:00 ಘಂಟೆಯಿಂದ ಸಂಜೆ: 06:00 ಘಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಮತ್ತು ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ವಿಭಾಗದ ಸಾಗರ ತಾಲ್ಲೂಕು ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಮನವಿ ಮಾಡಿದ್ದಾರೆ.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BIG NEWS: ರಾಜ್ಯದಲ್ಲೊಂದು ಹೃದಯ ವಿದ್ರಾವಕ ಘಟನೆ: ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ
HEALTH ALEART: ರಾತ್ರಿಯಲ್ಲಿ ಕಾಣಿಸಿಕೊಳ್ಳುವ ಈ 7 ಚಿಹ್ನೆಗಳು ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು..!