ಬೆಂಗಳೂರು: ಮಾನಹಾನಿ ಹೇಳಿಕೆ ಸಂಬಂಧದ ಪ್ರಕರಣದಲ್ಲಿ ಮಾಜಿ ಸಚಿವ ವಿ.ಸುನೀಲ್ ಕುಮಾರ್ ಕಾರ್ಕಳ ಅವರ ವಿರುದ್ಧ ವಿಚಾರಣಾ ನ್ಯಾಯಾಲಯ ಜಾರಿಗೊಳಿಸಿದ್ದಂತ ವಾರೆಂಟ್ ಗೆ ಹೈಕೋರ್ಟ್ ತಡೆ ನೀಡಿದೆ. ಈ ಮೂಲಕ ಮಾಜಿ ಸಚಿವ ಸುನೀಲ್ ಕುಮಾರ್ ಗೆ ಬಿಗ್ ರಿಲೀಫ್ ನೀಡಿದೆ.
ಮೇ.14, 2023ರಂದು ಮಾಜಿ ಸಚಿವ ವಿ.ಸುನೀಲ್ ಕುಮಾರ್ ಕಾರ್ಕಳ ಅವರು ಮಾನಹಾನಿ ಹೇಳಿಕೆಯನ್ನು ನೀಡಿದ್ದರು. ಈ ಸಂಬಂಧ ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರು ಸೆಪ್ಟೆಂಬರ್.7, 2023ರಂದು ಬೆಂಗಳೂರಿನ ಸಿಜೆಎಂ ಕೋರ್ಟ್ ಗೆ ಖಾಸಗಿ ದೂರು ದಾಖಲಿಸಿದ್ದರು.
ಪ್ರಮೋದ್ ಮುತಾಲಿಕ್ ಸಲ್ಲಿಸಿದ್ದಂತ ಮಾನಹಾನಿ ಹೇಳಿಕೆಯ ಖಾಸಗಿ ದೂರನ್ನು ವಿಚಾರಣೆ ನಡೆಸಿದ್ದಂತ ನ್ಯಾಯಾಲಯವು, ಸುನೀಲ್ ಕುಮಾರ್ ಗೆ ವಾರಂಟ್ ಜಾರಿಗೊಳಿಸಿತ್ತು. ಇಂತಹ ವಿಚಾರಣಾ ನ್ಯಾಯಾಲಯದ ವಾರಂಟ್ ಪ್ರಶ್ನಿಸಿ ಸುನೀಲ್ ಕುಮಾರ್ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದಂತ ಹೈಕೋರ್ಟ್ ನ್ಯಾಯಪೀಠವು ಆರಂಭದಲ್ಲಿ ವಾರಂಟ್ ಗೆ ತಡೆ ನೀಡಲು ನಿರಾಕರಿಸಿತು ಆದರೂ, ಪಕ್ಷವು ವಿಪ್ ಜಾರಿಗೊಳಿಸಿದ್ದರಿಂದ ವಿಚಾರಣೆಗೆ ವಿ.ಸುನೀಲ್ ಕುಮಾರ್ ಹಾಜರಾಗಲು ಸಾಧ್ಯವಾಗಿಲ್ಲ. ಹೀಗಾಗಿ ವಾರಂಟ್ ಗೆ ತಡೆ ನೀಡುವಂತೆ ಅವರ ಪರ ವಕೀಲ ವಿನೋದ್ ಕುಮಾರ್ ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಮನವಿ ಪುರಸ್ಕರಿಸಿದಂತ ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ವಾರಂಟ್ ಗೆ ತಡೆ ನೀಡಿದೆ.
HEALTH ALEART: ರಾತ್ರಿಯಲ್ಲಿ ಕಾಣಿಸಿಕೊಳ್ಳುವ ಈ 7 ಚಿಹ್ನೆಗಳು ಅಧಿಕ ಕೊಲೆಸ್ಟ್ರಾಲ್ ಲಕ್ಷಣಗಳು..!
54% ಪೋಷಕರು ಮಗುವಿನ ಪ್ರಶ್ನೆಗೆ ತಕ್ಷಣ ಉತ್ತರವನ್ನು ನೀಡುವುದಿಲ್ಲ: ಸಮೀಕ್ಷೆ