ವಿಜಯಪುರ: ಭೀಮಾತೀರದಲ್ಲಿ ಮತ್ತೊಂದು ಬೆಚ್ಚಿ ಬೀಳಿಸೋ ಘಟನೆ ನಡೆದಿದೆ. ಇನ್ನೋವಾ ಕಾರು ಹತ್ತಿಸಿ ವಕೀಲನನ್ನು ಕಿಲೋಮೀಟರ್ ದೂರದವರೆಗೆ ಹೊತ್ತೊಯ್ದು, ಸತ್ತ ಮೇಲೆ ಕಾರು ಸಹಿತ ಪರಾರಿಯಾಗಿರುವಂತ ಘಟನೆ ನಡೆದಿದೆ.
ವಿಜಯಪುರ ಜಿಲ್ಲೆಯ ಜಲಜನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಂತ ಭೀಮಾತಿರದ ಹಂತ ಕುಖ್ಯಾತಿಯ ಭಾಗಪ್ಪ ಅವರ ಸಂಬಂಧಿ ಹಾಗೂ ವಕೀಲ ರವಿ ಮೇಲಿನಮನಿ(37)ಗೆ ಇನ್ನೋವ ಕಾರೊಂದು ಡಿಕ್ಕಿ ಹೊಡೆಯಲಾಗಿದೆ. ಆ ಬಳಿಕ ಇನ್ನೋವಕಾರು ಬಸವನಗರದಿಂದ ಜಿ.ಪ ಪ್ರವೇಶದ್ವಾರದವರೆಗೆ ಸುಮಾರು ಎರಡೂವರೆ ಕಿಲೋಮೀಟರ್ ಹೊತ್ತೊಯ್ದಿದೆ ಎನ್ನಲಾಗಿದೆ.
ರವಿ ಮೇಲಿನಮಲಿ ಸಾವನ್ನಪ್ಪಿದ ನಂತ್ರ, ಇನ್ನೋವ ಕಾರು ಸಹಿತ ಚಾಲಕ ಪರಾರಿಯಾಗಿದ್ದಾನೆ. ಇದೊಂದು ವ್ಯವಸ್ಥಿತ ಕೃತ್ಯ, ಕೊಲೆ ಎಂಬುದಾಗಿ ಶಂಕಿಸಲಾಗಿದೆ. ಸ್ಥಳಕ್ಕೆ ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶಿ, ಎಎಸ್ ಪಿ, ಡಿವೈಎಸ್ಪಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
7ನೇ ವೇತನ ಆಯೋಗ : ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ | 7th Pay Commission
7ನೇ ವೇತನ ಆಯೋಗ : ಸರ್ಕಾರಿ ನೌಕರರಿಗೆ ಮತ್ತೊಂದು ಗುಡ್ ನ್ಯೂಸ್ | 7th Pay Commission
ಜನಪರ ಉದ್ದೇಶವಿಲ್ಲದ ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಜನರ ಸ್ಪಂದನೆಯಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್