ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧದ 8 ವರ್ಷಗಳ ಹಿಂದಿನ ಅಕ್ರಮ ಗಣಿಗಾರಿಕೆ ಕೇಸ್ ಮರು ಜೀವ ಪಡೆದುಕೊಂಡಿದೆ. ಈ ಪ್ರಕರಣ ಸಂಬಂಧ ಕಾಂಗ್ರೆಸ್ ಪಕ್ಷವು, ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕೆಲ ಗಂಭೀರ ಆರೋಪವನ್ನು ಮಾಡಿದೆ.
ಇಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವಂತ ಕರ್ನಾಟಕ ಕಾಂಗ್ರೆಸ್ ಪಕ್ಷವು, ಕರ್ನಾಟಕ ಕಂಡ ಅತ್ಯಂತ ಸಾಚಾ ರಾಜಕಾರಿಣಿ ನಾನು ಎಂದುಕೊಳ್ಳುವ HD ಕುಮಾರಸ್ವಾಮಿ ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲರ ಅನುಮತಿ ಕೋರಿತ್ತು ಕರ್ನಾಟಕ ಲೋಕಾಯುಕ್ತ ಎಂದಿದೆ.
ಬ್ರದರ್ ಸ್ವಾಮಿಗಳೇ, ಕರ್ನಾಟಕದ ಭೂಮಿಯ ಒಡಲನ್ನು ಭಗೆಯಲು ನಿಮಗೆ ಎಲ್ಲಿಲ್ಲದ ಆಸಕ್ತಿ ಎನ್ನುವುದು ಬಹಳ ಹಿಂದೆಯೇ ನಿರೂಪಿತವಾಗಿದೆಯಲ್ಲವೇ? ಈಗ ಮತ್ತೆ ಕೇಂದ್ರ ಗಣಿ ಸಚಿವರಾಗಲು ಅದೆಷ್ಟು ಲಾಭಿ ನಡೆಸಿದ್ದಿರೋ ಆ ದೇವರಿಗೇ ಗೊತ್ತು ಎಂದು ಹೇಳುವ ಮೂಲಕ ಗಂಭೀರ ಆರೋಪವನ್ನು ಮಾಡಿದೆ.
ಗಣಿಗಾರಿಕೆಯ ವಿಷಯ ಎಂದರೆ ಕುಮಾರಸ್ವಾಮಿಯವರಿಗೆ ಅಷ್ಟೊಂದು ಆಸಕ್ತಿ ಇರುವುದರ ಹಿಂದೆ ಗಣಿಗಾರಿಕೆಯಲ್ಲಿ ಲೂಟಿಗಾರಿಕೆಗೆ ಹೆಚ್ಚು ಅವಕಾಶವಿದೆ ಎಂಬ ಸತ್ಯವೇ ಕಾರಣವಲ್ಲವೇ?! ಎಂದು ಪ್ರಶ್ನಿಸಿದೆ.
ಕರ್ನಾಟಕ ಕಂಡ ಅತ್ಯಂತ ಸಾಚಾ ರಾಜಕಾರಿಣಿ ನಾನು ಎಂದುಕೊಳ್ಳುವ @hd_kumaraswamy ಅವರ ವಿರುದ್ಧ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ತನಿಖೆಗೆ ರಾಜ್ಯಪಾಲರ ಅನುಮತಿ ಕೋರಿತ್ತು ಕರ್ನಾಟಕ ಲೋಕಾಯುಕ್ತ.
ಬ್ರದರ್ ಸ್ವಾಮಿಗಳೇ, ಕರ್ನಾಟಕದ ಭೂಮಿಯ ಒಡಲನ್ನು ಭಗೆಯಲು ನಿಮಗೆ ಎಲ್ಲಿಲ್ಲದ ಆಸಕ್ತಿ ಎನ್ನುವುದು ಬಹಳ ಹಿಂದೆಯೇ ನಿರೂಪಿತವಾಗಿದೆಯಲ್ಲವೇ? ಈಗ… pic.twitter.com/XBnCXIGLN5
— Karnataka Congress (@INCKarnataka) August 8, 2024
BIG NEWS: ‘ಹೊರಗುತ್ತಿಗೆ ನೌಕರ’ರಿಗೂ ‘ಮಾತೃತ್ವ ರಜೆ’ ಅನ್ವಯ: ಹೈಕೋರ್ಟ್ ಮಹತ್ವದ ತೀರ್ಪು
RBI ನಿಂದ ಮಹತ್ವದ ತೀರ್ಮಾನ: ಈಗ ನಿಮ್ಮ ಚೆಕ್ ಅನ್ನು ಶೀಘ್ರದಲ್ಲೇ ಬ್ಯಾಂಕಿನಿಂದ ಕ್ಲೀಯರ್…!