ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ನಟಿ ಹೇಮಾ ಭಾಗಿಯಾಗಿರುವುದು ಸತ್ಯ ಎಂದು ಪೊಲೀಸರು ಚಾರ್ಜ್ ಶೀಟ್ ನಲ್ಲಿ ತಿಳಿಸಲಾಗಿದೆ.
ಬೆಂಗಳೂರಿನಲ್ಲಿ ನಡೆದ ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾ ಸೇರಿ 85 ಕ್ಕೂ ಹೆಚ್ಚು ಜನರ ವಿರುದ್ಧ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ. ನಟಿ ಹೇಮಾ ಸೇರಿ 85 ಮಂದಿ ಪಾರ್ಟಿಯಲ್ಲಿ ಡ್ರಗ್ಸ್ ಸೇವಿಸಿರುವುದು ಧೃಡವಾಗಿದ್ದು, ಈ ಹಿನ್ನೆಲೆ ನಟಿ ಹೇಮಾ ಸೇರಿ 85 ಕ್ಕೂ ಹೆಚ್ಚು ಜನರ ವಿರುದ್ಧ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
ತಾವು ಈ ಪಾರ್ಟಿಯಲ್ಲಿ ಇರಲಿಲ್ಲ ಎಂದು ವಿಡಿಯೋ ಮೂಲಕ ಹೇಮಾ ಅವರು ಸ್ಪಷ್ಟಪಡಿಸಿದ್ದರು. ಅದರ ಬೆನ್ನಲ್ಲೇ ಅಸಲಿ ವಿಷಯ ಗೊತ್ತಾಗಿದೆ. ರೇವ್ ಪಾರ್ಟಿ (Rave Party) ನಡೆದ ಬೆಂಗಳೂರಿನ ರೆಸಾರ್ಟ್ನಿಂದಲೇ ವಿಡಿಯೋ ಮಾಡಿ ‘ನಾನು ಹೈದರಾಬಾದ್ನಲ್ಲಿ ಇದ್ದೀನಿ’ ಎಂದು ಹೇಮಾ ಸುಳ್ಳು ಹೇಳಿದ್ದರು.