ಬೆಂಗಳೂರು: ರಾಜ್ಯದಲ್ಲಿ ಡೆಂಗ್ಯೂ ಆರ್ಭಟಿಸಿದೆ. ಮಳೆಯ ಇಳಿಮುಖದ ನಡುವೆಯೂ ಇಂದು 279 ಜನರಿಗೆ ಡೆಂಗ್ಯೂ ಪಾಸಿಟಿವ್ ಅಂತ ವರದಿಯಲ್ಲಿ ದೃಢಪಟ್ಟಿದೆ. ಹೀಗಾಗಿ ಪ್ರಕರಣಗಳ ಸಂಖ್ಯೆ 20,202ಕ್ಕೆ ಏರಿಕೆಯಾಗಿದೆ.
ಈ ಕುರಿತಂತೆ ರಾಜ್ಯ ಆರೋಗ್ಯ ಇಲಾಖೆಯಿಂದ ರಿಪೋರ್ಟ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ 1943 ಜನರನ್ನು ಡೆಂಗ್ಯೂ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ 279 ಜನರಿಗೆ ಪಾಸಿಟಿವ್ ಬಂದಿರುವುದಾಗಿ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 463 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 104 ಜನರಿಗೆ, ಬೆಗಂಳೂರು ನಗರ ವ್ಯಾಪ್ತಿಯಲ್ಲಿ 150 ಪರೀಕ್ಷೆಯಲ್ಲಿ 18 ಮಂದಿಗೆ, ಕೋಲಾರದಲ್ಲಿ 11 ಮಂದಿಗೆ ಡೆಂಗ್ಯೂ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಲ್ಲಿ ದೃಢಪಟ್ಟಿದೆ ಅಂತ ತಿಳಿಸಿದೆ.
ಇನ್ನೂ ಬಳ್ಳಾರಿಯಲ್ಲಿ 20, ವಿಜಯನಗರ 10, ಮಂಡ್ಯ 20, ಉಡುಪಿ 10, ಕಲಬುರ್ಗಿ 15, ಬೆಳಗಾವಿ 13 ಸೇರಿದಂತೆ ಇಂದು ಒಟ್ಟು 279 ಮಂದಿಗೆ ಡೆಂಗ್ಯೂ ಪಾಸಿಟಿವ್ ದೃಢಪಟ್ಟಿದೆ. ಹೀಗಾಗಿ ಡೆಂಗ್ಯೂ ಕೇಸ್ ಸಂಖ್ಯೆ 20,202ಕ್ಕೆ ಏರಿಕೆಯಾಗಿದೆ. ಈವರೆಗೆ 10 ಮಂದಿ ಡೆಂಗ್ಯೂನಿಂದ ಸಾವನ್ನಪ್ಪಿದ್ದಾರೆ ಎಂಬುದಾಗಿ ಮಾಹಿತಿ ನೀಡಿದೆ.
BREAKING: ಮದುವೆಯಾದ ಕೆಲ ಗಂಟೆಯಲ್ಲೇ ವಧು-ವರ ಹೊಡೆದಾಟ: ಗಂಭೀರವಾಗಿ ಗಾಯಗೊಂಡಿದ್ದ ವಧು ಸಾವು
BREAKING: ನನ್ನ ವಿರುದ್ಧದ ಆರೋಪ ಸಾಬೀತು ಪಡಿಸಿದ್ರೇ ‘ರಾಜಕೀಯ ನಿವೃತ್ತಿ’: ಶಾಸಕ ಬೇಳೂರು ಗೋಪಾಲಕೃಷ್ಣ ಸವಾಲ್
ಆ.22ರಿಂದ ಬೆಂಗಳೂರಲ್ಲಿ ಅತಿದೊಡ್ಡ ಕೃಷಿ ಮತ್ತು ಆಹಾರ ಪ್ರದರ್ಶನ ಮೇಳ | AgriTech India 2024