ಬೆಂಗಳೂರು: ರಾಜ್ಯ ಸರ್ಕಾರದಿಂದ ಯಜಮಾನಿಯರಿಗೆ ಗುಡ್ ನ್ಯೂಸ್ ಎನ್ನುವಂತೆ ಗೃಹಲಕ್ಷ್ಮೀ ಯೋಜನೆಯ ಜೂನ್, ಜುಲೈ ತಿಂಗಳ ಹಣ ಜಮಾ ಮಾಡಲಾಗಿದೆ. ಈ ಬಗ್ಗೆ ಅನೇಕ ಯಜಮಾನಿಯರು ತಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಿರುವ ಸ್ಕ್ರೀನ್ ಶಾಟ್ ಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹಾಗಾದ್ರೇ ನಿಮಗೆ ಬಂದಿರದೇ ಇದ್ರೇ ತಪ್ಪದೇ ಆ ಕೆಲಸ ಮಾಡಬೇಕಿದೆ. ಅದೇನು ಅಂತ ಮುಂದೆ ಓದಿ.
ನಿನ್ನೆಯಷ್ಟೇ ಮಂಡ್ಯದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಕಳೆದ ಎರಡು ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಇಂದೇ ಜಮಾ ಮಾಡಲಾಗುವುದು. ಎರಡು ತಿಂಗಳ ಹಣ ಇಂದು ಮನೆ ಒಡತಿಯರ ಬ್ಯಾಂಕ್ ಅಕೌಂಟ್ ಗೆ ಜಮಾ ಆಗಲಿದ್ದು, ಇದರ ಬಗ್ಗೆ ಗೊಂದಲ ಬೇಡ. ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದಿದ್ದರು.
ಈ ಬೆನ್ನಲ್ಲೇ ಇಂದು ಜೂನ್, ಜುಲೈ ತಿಂಗಳ ಗೃಹಲಕ್ಷ್ಮೀ ಯೋಜನೆಯ ಹಣವನ್ನು ಫಲಾನುಭವಿಗಳಾದಂತ ಯಜಮಾನಿಯರ ಖಾತೆಗೆ ಜಮಾ ಮಾಡಲಾಗಿದೆ. ಒಂದು ವೇಳೆ ಬಂದಿಲ್ಲದೇ ಇದ್ದರೇ ನಾಳೆ ಅಥವಾ ನಾಡಿದ್ದು ಬರಬಹುದು.
ಇನ್ನೂ ಸರ್ಕಾರದ ಗೃಹ ಲಕ್ಷ್ಮೀ ಯೋಜನೆ ರೂ.2000 ಹಣ ಬಾರದಂತ ಯಜಮಾನಿ ಮಹಿಳೆಯರು, ತಪ್ಪದೇ ಕೆವೈಸಿ ಮಾಡಿಸುವಂತೆ ತಿಳಿಸಿದೆ. ಅಲ್ಲದೇ ಬ್ಯಾಂಗ್ ಖಾತೆಗೆ ಆಧಾರ್ ಸಂಖ್ಯೆ ಲಿಂಕ್ ಮಾಡಬೇಕು. ರೇಷನ್ ಕಾರ್ಡ್ ನಲ್ಲಿರೋ ಪ್ರತಿಯೊಬ್ಬ ಸದಸ್ಯರ ಕೆವೈಸಿ ಅಪ್ ಡೇಟ್ ಆಗಿರಬೇಕು ಅಂತ ಹೇಳಿದೆ.
ಇನ್ನೂ ರೇಷನ್ ಕಾರ್ಡ್ ಸದಸ್ಯರು ಬ್ಯಾಂಕ್ ಗಳಿಗೆ ತೆರಳಿ ತಮ್ಮ ಆಧಾರ್ ಸಂಖ್ಯೆ ನೀಡಿ, ಕೈವೈಸಿ ಅಪ್ ಡೇಟ್ ಮಾಡಿಸಬೇಕು. ಗೃಹ ಲಕ್ಷ್ಮೀ ಯೋಜನೆಯ ಫಲಾನುಭವಿಗಳು NPCI ಮಾಡಿಸೋದು ಕಡ್ಡಾಯವಾಗಿದೆ. ಬ್ಯಾಂಕ್ ಖಾತೆಯಲ್ಲಿನ ಹೆಸರು, ಆಧಾರ್ ಕಾರ್ಡ್ ನಲ್ಲಿನ ಹೆಸರು ಒಂದೇ ಆಗಿದ್ಯಾ ಅಂತ ಚೆಕ್ ಮಾಡಿ. ತಪ್ಪಿದ್ದರೇ ಸರಿ ಪಡಿಸಿಕೊಳ್ಳುವಂತೆ ತಿಳಿಸಿದೆ.
ಈ ಎಲ್ಲಾ ತಾಂತ್ರಿಕ ಸಮಸ್ಯೆಯನ್ನು ಗೃಹಲಕ್ಷ್ಮೀ ಯೋಜನೆಯ ಫಲಾನುಭವಿಗಳಾದಂತ ಯಜಮಾನಿ ಮಹಿಳೆಯರು ಮಾಡಿಕೊಂಡಿದ್ದೇ ಆದಲ್ಲಿ, ಪ್ರತಿ ತಿಂಗಳು ರೂ.2000 ನಿಮ್ಮ ಬ್ಯಾಂಕ್ ಖಾತೆಗೆ ಜಮಾ ಆಗಲಿದೆ ಅಂತ ರಾಜ್ಯ ಸರ್ಕಾರ ಮಾಹಿತಿ ನೀಡಿದೆ.
BIG UPDATE : ಒಲಿಂಪಿಕ್ಸ್ ನಿಂದ `ವಿನೇಶ್ ಪೋಗಟ್’ ಅನರ್ಹ ಪ್ರಶ್ನಿಸಿ ಭಾರತದ ನಿಯೋಗದಿಂದ ದೂರು!
ಇಂದಿನ ಹಿನ್ನಡೆ ನೋವುಂಟು ಮಾಡಿದೆ: ‘ಒಲಿಂಪಿಕ್ಸ್’ನಲ್ಲಿ ವಿನೇಶ್ ಫೋಗಟ್ ಅನರ್ಹತೆಗೆ ‘ಪ್ರಧಾನಿ ಮೋದಿ’ ಹತಾಶೆ