ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಸಂಬಂಧ ಎರಡನೇ ಹಂತದ ವಿಚಾರಣೆಗೆ ಬರುವಂತೆ ಕೋನಂ ವೆಂಕಟರೆಡ್ಡಿ ಕುಟುಂಬಕ್ಕೆ ಇಡಿ ಅಧಿಕಾರಿಗಳು ಮತ್ತೊಂದು ನೋಟೀಸ್ ನೀಡಿದ್ದಾರೆ. ಈ ಮೂಲಕ ಇಡಿ ಅಧಿಕಾರಿಗಳು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ, ಮುಡಾ ಹಗರಣ ಸಂಬಂಧ ಬಿಜೆಪಿ-ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ಇಡಿ ಅಧಿಕಾರಿಗಳಇಂದ ಎರಡನೇ ಹಂತದ ವಿಚಾರಣೆಗೆ ಬರುವಂತೆ ರಾಯಚೂರಿನ ಕೋನಂ ವೆಂಕಟರೆಡ್ಡಿ ಕುಟುಂಬಕ್ಕೆ ನೋಟಿಸ್ ನೀಡಲಾಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬೂದಿವಾಳ್ ಕ್ಯಾಂಪ್ ನಲ್ಲಿರುವಂತ ಕೋನಂ ವೆಂಕಟರೆಡ್ಡಿ ಕುಟುಂಬಕ್ಕೆ ನೆಟ್ಟಂಕಿ ಮೂಲಕ ಹಣ ವರ್ಗಾವಣೆಯನ್ನು ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ಆಗಿತ್ತು ಎನ್ನಲಾಗಿದೆ. ಈಗಾಗಲೇ ಈ ಕೇಸಲ್ಲಿ ಮೊದಲ ಬಾರಿಗೆ ವಿಚಾರಣೆ ಎದುರಿಸಲಾಗಿತ್ತು. ಈಗ ಮತ್ತೊಮ್ಮೆ ವಿಚಾರಣೆಗೆ ನೋಟಿಸ್ ಅನ್ನು ಇಡಿ ನೀಡಿದೆ.
BREAKING: ನನ್ನ ವಿರುದ್ಧದ ಆರೋಪ ಸಾಬೀತು ಪಡಿಸಿದ್ರೇ ‘ರಾಜಕೀಯ ನಿವೃತ್ತಿ’: ಶಾಸಕ ಬೇಳೂರು ಗೋಪಾಲಕೃಷ್ಣ ಸವಾಲ್