ಮನುಷ್ಯನ ದೇಹಕ್ಕೆ ಉಟಕ್ಕಿಂತಲು ನೀರು ತುಂಬಾ ಮುಖ್ಯವಾಗುತ್ತದೆ. ದೇಹದಲ್ಲಿ ಮುಕ್ಕಾಲು ಭಾಗ ನೀರು ಆವೃತವಾಗಿದೆ. ಹೀಗಿದ್ದರೂ ತಜ್ಞರ ಪ್ರಕಾರ ಮನುಷ್ಯ ಆರೋಗ್ಯವಾಗಿರಬೇಕೆಂದರೆ ದಿನವೊಂದಕ್ಕೆ ಕನಿಷ್ಟ ಎಂಟು ಗ್ಲಾಸ್ ನೀರು ಸೇವಿಸಬೇಕು. ದಿನವೂ ತಣ್ಣೀರಿನ ಜೊತೆಗೆ ಒಂದು ಗ್ಲಾಸ್ ಬಿಸಿ ನೀರು ಸೇವಿಸಿ ಆಗ ನಿಮ್ಮ ಆರೋಗ್ಯದ ಮೇಲೆ ಚಮತ್ಕಾರವೇ ಆಗಿಬಿಡುತ್ತದೆ.
ಬೆಳಗ್ಗೆ ನಿತ್ಯ ಕರ್ಮಗಳನ್ನು ಮುಗಿಸಿಕೊಂಡು ವ್ಯಾಯಾಮ ಶುರು ಮಾಡುವ ಮೊದಲು ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿಯಿರಿ. ಹೀಗೆ ಮಾಡಿದರೆ ದೇಹದ ತಾಪಮಾನ ಹೆಚ್ಚಾಗುತ್ತದೆ. ಇದು ವ್ಯಾಯಾಮದ ಒಂದು ಬಗೆ ಅಂದರೂ ತಪ್ಪಿಲ್ಲ. ಪ್ರತಿದಿನ ಬೆಚ್ಚಗಿನ ನೀರು ಸೇವೆನ ಮಾಡಿದರೆ ದೇಹದಲ್ಲಿನ ವಿಷಕಾರಿ ಅಂಶ ಕಡಿಮೆಯಾಗುತ್ತದೆ. ಇದರಿಂದ ಚರ್ಮದ ಆರೋಗ್ಯ ಚೆನ್ನಾಗಿರುತ್ತದೆ. ಹಾಗು ತ್ವಚೆ ಹೊಳಪಿನಿಂದ ಕೂಡಿರುತ್ತದೆ. ಚರ್ಮ ಭಾಗದಲ್ಲಿ ಕಂಡುಬರುವ ರಕ್ತನಾಳಗಳಲ್ಲಿ ಅಧಿಕ ರಕ್ತಸಂಚಾರ ಉಂಟಾಗುತ್ತದೆ ಹಾಗು ಚರ್ಮದ ಜೀವಕೋಶಗಳಿಗೆ ಪೌಷ್ಟಿಕ ಸತ್ವವನ್ನು ನೀಡುತ್ತದೆ.
ಉಗುರು ಬೆಚ್ಚಗಿನ ನೀರು ಚರ್ಮದ ಭಾಗದಲ್ಲಿ ಕಂಡುಬರುವ ಫ್ರೀ ರಾಡಿಕಲ್ ಅಂಶವನ್ನು ಹೊರ ಹಾಕುವ ಸಾಮರ್ಥ್ಯ ಹೊಂದಿದೆ. ಹೀಗೆ ಪ್ರತಿದಿನ ಬೆಚ್ಚಗಿನ ನೀರು ಸೇವಿಸುವುದರಿಂದ ಚರ್ಮದ ತಾಜಾತನ ಹೆಚ್ಚಾಗುತ್ತದೆ. ಚರ್ಮದ ಮೇಲೆ ಸುಕ್ಕು ಬೀಳುವ ಸಂಭವ ಕಡಿಮೆಯಾಗುತ್ತದೆ. ಮುಖದ ತ್ವಚೆ ಕಲೆರಹಿತವಾಗಿರುತ್ತದೆ. ನೀವು ವಯಸ್ಸಾದ ಮೇಲೆಯೂ ಯವ್ವನದ ತ್ವಚೆ ಬೇಕೆಂದರೆ ನಿತ್ಯವೂ ತಪ್ಪದೇ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರು ಸೇವನೆಯನ್ನು ತಪ್ಪಿಸಬೇಡಿ.
ತೀರಾ ಬಿಸಿ ಅಲ್ಲದ ಉಗುರು ಬೆಚ್ಚಗಿನ ನೀರು ಸೇವನೆ ಮಾಡಿದರೆ ದೇಹದ ಜೀರ್ಣಾಂಗ ವ್ಯವಸ್ಥೆ ಸರಿಯಾಗಿ ಆಗುತ್ತದೆ. ಬಿಸಿ ನೀರಿನ ಸೇವನೆಯಿಂದ ಕರಳುಗಳು ಸ್ವಚ್ಛಗೊಳ್ಳುತ್ತವೆ. ಬೆಚ್ಚಗಿನ ನೀರು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತೀರಾ ಅನುಕೂಲವಾಗುತ್ತದೆ. ಇದರಿಂದ ದೇಹದ ಒಳ ಅಂಗಗಳು ಸ್ವಚ್ಛಗೊಳ್ಳುತ್ತವೆ.
ದೇಹದ ತೂಕ ಕಡಿಮೆ ಮಾಡಿಕೊಳ್ಳಬಯಸುವವರು ತಪ್ಪದೇ ದಿನವೂ ಬೆಚ್ಚಗಿನ ನೀರು ಸೇವಿಸಿ. ಇದು ಮೆಟಬಾಲಿಸಂ ಕ್ರಿಯೆಯನ್ನು ಉತ್ತೇಜಿಸುತ್ತದೆ. ದೇಹದ ಕೊಬ್ಬು ಬೇಗನೆ ಕರಗುವಲ್ಲಿ ಸಹಾಯವಾಗುತ್ತದೆ.