ಕೆಎನ್ಎನ್ಡಿಜಿಟಲ್ ಡೆಸ್ಕ್ : ಮಹೇಶ್ವರಿ ಚೌಹಾಣ್ ಮತ್ತು ಅನಂತ್ ಜೀತ್ ಸಿಂಗ್ ನರುಕಾ ಸೋಮವಾರ (ಆಗಸ್ಟ್ 6) ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಿಶ್ರ ತಂಡ ಸ್ಕೀಟ್ ಫೈನಲ್ಗೆ ಅರ್ಹತೆ ಪಡೆದರು. ಕಂಚಿನ ಪದಕಕ್ಕಾಗಿ ನಡೆಯಲಿರುವ ಪಂದ್ಯದಲ್ಲಿ ಅವರು ಚೀನಾವನ್ನು ಎದುರಿಸಲಿದ್ದಾರೆ.
ಮಿಶ್ರ ತಂಡ ಸ್ಪರ್ಧೆಯ ಅರ್ಹತಾ ಹಂತದಲ್ಲಿ, ಚೌಹಾಣ್ ಮತ್ತು ನರುಕಾ ಅವರ ಸಂಯೋಜನೆಯು 49, 48 ಮತ್ತು 49ರ ಮೂರು ಸರಣಿಗಳಲ್ಲಿ ಒಟ್ಟು 146 ಅಂಕಗಳನ್ನ ಗಳಿಸಿತು.
ಮಹೇಶ್ವರಿ ತನ್ನ ಮೂರು ಸರಣಿ ಶಾಟ್ ಗಳಲ್ಲಿ 24, 25 ಮತ್ತು 25 ರನ್ ಗಳಿಸಿದರು. ನರುಕಾ 25, 23 ಮತ್ತು 24 ರನ್ ಗಳಿಸಿದರು.
146 ಅಂಕಗಳನ್ನು ಗಳಿಸಿರುವ ಭಾರತದ ಜೋಡಿ 15 ತಂಡಗಳ ಪೈಕಿ ನಾಲ್ಕನೇ ಸ್ಥಾನದಲ್ಲಿದೆ.
ಅಗ್ರ ಎರಡು ತಂಡಗಳಾದ ಇಟಲಿ ಮತ್ತು ಯುಎಸ್ಎ ಚಿನ್ನದ ಪದಕಕ್ಕಾಗಿ ಅರ್ಹತೆ ಪಡೆದರೆ, ಭಾರತ-ಚೀನಾ ಕಂಚಿನ ಪದಕಕ್ಕಾಗಿ ಹೋರಾಟಕ್ಕೆ ಇಳಿದವು.
ಅಶೋಕ್ ಅವರೇ ವಾಲ್ಮೀಕಿ ನಿಗಮದ ಕೇಸ್ ಬಗ್ಗೆ ಹೇಳುವುದಿದ್ದರೇ, ಕೇಳುವುದಿದ್ದರೇ SIT ಮುಂದೆ ಕೇಳಿ, ಹೇಳಿ: ಸಿಎಂ
ಅಜ್ಜಯ್ಯನ ಸುದ್ದಿಗೆ ಬರಬೇಡ, ನಿಮ್ಮ ಪಾದಯಾತ್ರೆಗೆ ಹೆದರುವವನು ನಾನಲ್ಲ: HDK ವಿರುದ್ಧ ಡಿಕೆಶಿ ಗುಡುಗು
BREAKING : ರೊಮಾನಿಯ ಮಣಿಸಿದ ಭಾರತದ ‘ಮಹಿಳಾ ಟೇಬಲ್ ಟೆನಿಸ್ ತಂಡ’, ‘ಕ್ವಾರ್ಟರ್ ಫೈನಲ್’ಗೆ ಎಂಟ್ರಿ |Paris Olympics