ನವದೆಹಲಿ : ವಿಶೇಷ ಉದ್ಯೋಗ ಕೋಟಾ ಕುರಿತು ಮಾರಣಾಂತಿಕ ಪ್ರತಿಭಟನೆಗಳ ಮಧ್ಯೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ದೇಶದಿಂದ ಪಲಾಯನ ಮಾಡಿದ್ದಾರೆ . ಇನ್ನು ಭಾರತದ ತ್ರಿಪುರಾದಲ್ಲಿ ಅವ್ರ ಹೆಲಿಕಾಪ್ಟರ್ ಲ್ಯಾಂಡ್ ಆಗಿದ್ದು, ಅಜ್ಞಾತ ಸ್ಥಳಕ್ಕೆ ಅವ್ರನ್ನ ಬಿಎಸ್‍ಎಫ್ ಶಿಫ್ಟ್ ಮಾಡಲಾಗಿದೆ ಎಂದ ವರದಿಯಾಗಿದೆ.
ಇದಲ್ಲದೆ, ಗಡಿ ಭದ್ರತಾ ಪಡೆ (BSF) ಭಾರತ-ಬಾಂಗ್ಲಾದೇಶ ಗಡಿಯ 4,096 ಕಿ.ಮೀ ಉದ್ದಕ್ಕೂ ಎಲ್ಲಾ ಘಟಕಗಳಿಗೆ ‘ಹೈ ಅಲರ್ಟ್’ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 300 ಜನರ ಸಾವಿಗೆ ಕಾರಣವಾದ ಮೀಸಲಾತಿ ಪ್ರತಿಭಟನೆಯ ಮಧ್ಯೆ ಪ್ರತಿಭಟನಾಕಾರರು ಹಸೀನಾ ಅವರ ರಾಜೀನಾಮೆಗೆ ಒತ್ತಾಯಿಸಿದ ನಂತ್ರ ಈ ಬೆಳವಣಿಗೆ ನಡೆದಿದೆ.
ಪಶ್ಚಿಮ ಬಂಗಾಳದ ಅಜ್ಞಾತ ಸ್ಥಳವೊಂದರಲ್ಲಿ ನೆಲೆಸಲಿದ್ದಾರೆ ಎಂದು ವರದಿಯಾಗಿದೆ. ಬಾಂಗ್ಲಾದೇಶದ ಪ್ರಧಾನಿ ಈಗಾಗಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ಸೂಚಿಸುತ್ತವೆ.
ಶೇಖ್ ಹಸೀನಾ ಮತ್ತು ಅವರ ಕಿರಿಯ ಸಹೋದರಿ ಶೇಖ್ ರೆಹಾನಾ ಸೋಮವಾರ ಮಧ್ಯಾಹ್ನ 2: 30ರ ಸುಮಾರಿಗೆ ಹೆಲಿಕಾಪ್ಟರ್’ನಲ್ಲಿ ಬಂಗಭಬನ್’ನಿಂದ ಹೊರಟರು.
BREAKING : ಬಾಂಗ್ಲಾ ಪ್ರಧಾನಿ ‘ಶೇಖ್ ಹಸೀನಾ’ ರಾಜೀನಾಮೆ, ಭಾರೀ ಪ್ರತಿಭಟನೆ ನಡುವೆ ‘ಸೇನೆ’ಗೆ ಅಧಿಕಾರ ಹಸ್ತಾಂತರ
BREAKING : ಬಾಂಗ್ಲಾ ಪ್ರಧಾನಿ ‘ಶೇಖ್ ಹಸೀನಾ’ ರಾಜೀನಾಮೆ : ‘ಮಧ್ಯಂತರ ಸರ್ಕಾರ’ ರಚಿಸುವುದಾಗಿ ‘ಸೇನೆ’ ಘೋಷಣೆ
BREAKING : ಬಾಂಗ್ಲಾ ಪ್ರಧಾನಿ ‘ಶೇಖ್ ಹಸೀನಾ’ ರಾಜೀನಾಮೆ, ಭಾರೀ ಪ್ರತಿಭಟನೆ ನಡುವೆ ‘ಸೇನೆ’ಗೆ ಅಧಿಕಾರ ಹಸ್ತಾಂತರ