ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಎನ್ ಐಎ ಅಧಿಕಾರಿಗಳ ತಂಡ ಇಂದು ಸ್ಥಳ ಮಹಜರು ನಡೆಸುತ್ತಿದೆ.
ಬೆಂಗಳೂರಿನ ರಾಮೇಶ್ವರ್ ಕೆಫೆಯಲ್ಲಿ ಆರೋಪಿ ಮುಸಾವಿರ್ ನನ್ನ ಕರೆತಂದಿರುವ ಎನ್ ಐಎ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದಾರೆ.
ಬೆಂಗಳೂರಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಕೆಫೆಯಲ್ಲಿ ಮಾರ್ಚ್ 1ರಂದು ಬಾಂಬ್ ಸ್ಫೋಟಿಸಲಾಗಿತ್ತು. ಬಾಂಬ್ ಇರಿಸಿದ್ದ ತೀರ್ಥಹಳ್ಳಿಯ ಮುಸಾವೀರ್ ಹಾಗೂ ಅಬ್ದುಲ್ ಮಥೀನ್ ಪಶ್ಚಿಮ ಬಂಗಾಳದಲ್ಲಿ ಏಪ್ರಿಲ್ 12 ರಂದು ಕಾರ್ಯಾಚರಣೆ ನಡೆಸಿ ಬಂಧಿಸಲಾಗಿತ್ತು. ಇದೀಗ ಆರೋಪಿಯನ್ನು ಕರೆತಂದು ಸ್ಥಳ ಮಹಜರು ನಡೆಸಲಾಗುತ್ತಿದೆ.
ಇನ್ನು ರಾಮೇಶ್ವರಂ ಕೆಫೆ ಬಾಂಬ್ ಸ್ಪೋಟದ ದೃಶ್ಯವನ್ನು ಎನ್ ಐಎ ಅಧಿಕಾರಿಗಳು ಮರುಸೃಷ್ಟಿಸಲಾಗಿದ್ದು, ಆರೋಪಿ ಮುಸಾವಿರ್ ಕೆಫೆಗೆ ಹೇಗೆ ಬಂದಿದ್ದ? ಕೆಫೆಯಲ್ಲಿ ಕನ್ನಡಕ, ಟೋಪಿ ಹಾಕಿಕೊಂಡು ಬಾಂಬ್ ಎಲ್ಲಿ ಇಟ್ಟು ಹೋಗಿದ್ದ ಎಂಬುದರ ಕುರಿತು ದೃಶ್ಯ ಮರುಸೃಷ್ಟಿಸಲಾಗಿದೆ.