ಕಾರವಾರ : ಶೀಘ್ರವೇ ಬಿಜೆಪಿಗರ ಹಗರಣಗಳನ್ನು ಹೊರತಂದು ಮಾಡಿ, ಅವರ ಬಂಡವಾಳ ಬಯಲು ಮಾಡುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ – ಜೆಡಿಎಸ್ ನಾಯಕರಿಗೆ ಇಲ್ಲ. ಅವರದೇ ಹಗರಣಗಳ ರಾಶಿ ಬಿದ್ದಿದೆ, ಅವೆಲ್ಲವನ್ನೂ ಆದಷ್ಟು ಶೀಘ್ರದಲ್ಲಿ ಹೊರತಂದು ಅವರ ಬಂಡವಾಳ ಬಯಲು ಮಾಡುತ್ತೇವೆ ಎಂದರು.
ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿ – ಜೆಡಿಎಸ್ ನಾಯಕರಿಗೆ ಇಲ್ಲ. ಅವರದೇ ಹಗರಣಗಳ ರಾಶಿ ಬಿದ್ದಿದೆ, ಅವೆಲ್ಲವನ್ನೂ ಆದಷ್ಟು ಶೀಘ್ರದಲ್ಲಿ ಹೊರತಂದು ಅವರ ಬಂಡವಾಳ ಬಯಲು ಮಾಡುತ್ತೇವೆ.#BjpScams pic.twitter.com/nvCmi8LNy5
— Siddaramaiah (@siddaramaiah) August 3, 2024
ಗುಡ್ಡ ಕುಸಿತದಿಂದಾಗಿ ನೆರೆಯ ಕೇರಳ ರಾಜ್ಯ ಸಂಕಷ್ಟದಲ್ಲಿದೆ. ನೂರಾರು ಮನೆಗಳು ಕೊಚ್ಚಿ ಹೋಗಿದ್ದು ಜನರ ಬದುಕು ಬೀದಿಪಾಲಾಗಿದೆ, ಇಂತಹ ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ಜೊತೆ ನಿಂತು ಅವರಿಗೆ ಮರಳಿ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು ಎಂಬ ಉದ್ದೇಶದಿಂದ ಗುಡ್ಡ ಕುಸಿತದಲ್ಲಿ ಮನೆ ಕಳೆದುಕೊಂಡ 100 ಕುಟುಂಬಗಳಿಗೆ ಮನೆ ಕಟ್ಟಿಕೊಡಬೇಕು ಎಂದು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಸಂಬಂಧ ಇಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜೊತೆ ಮಾತನಾಡಿ, ನೆರವಿನ ಭರವಸೆ ನೀಡಿದ್ದೇನೆ ಎಂದು ತಿಳಿಸಿದ್ದಾರೆ.