ಬೆಂಗಳೂರು : 2023 -24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯ ದಿನಾಂಕವನ್ನು ಮುಂದೂಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಿಎಂ ಸಿದ್ದರಾಮಯ್ಯ, 2023 -24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ 384 ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆಯ ಹೊಸ ದಿನಾಂಕವನ್ನು ಕರ್ನಾಟಕ ಲೋಕಸೇವಾ ಆಯೋಗ ಶೀಘ್ರವೇ ಪ್ರಕಟಿಸಲಿದೆ ಎಂದು ತಿಳಿಸಿದ್ದಾರೆ.
ಆಗಸ್ಟ್ 25 ರಂದು ನಡೆಯಲಿರುವ ಐಬಿಪಿಎಸ್ ಕ್ಲರ್ಕ್ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ಹಿತದೃಷ್ಟಿಯಿಂದ, ಕೆಪಿಎಸ್ಸಿಯೊಂದಿಗೆ ಸಮಾಲೋಚಿಸಿ, ಗೆಜೆಟೆಡ್ ಪ್ರೊಬೇಷನರಿ ಪ್ರಿಲಿಮಿನರಿ ಪರೀಕ್ಷೆ 2024 ಅನ್ನು ಅಲ್ಪಾವಧಿಗೆ ಮುಂದೂಡಲು ಸಿಎಂ ಸಿದ್ದರಾಮಯ್ಯ ಕೆಪಿಎಸ್ ಸಿಗೆ ಸೂಚನೆ ನೀಡಿದ್ದಾರೆ.
In the interest of candidates appearing for the IBPS Clerk exam on August 25th, in consultation with KPSC, I have suggested to the KPSC to do a short postponement of the Gazetted Probationer Preliminary Exam 2024.
I am told the KPSC will conduct the GP Exam 2024 in the same week…
— Siddaramaiah (@siddaramaiah) August 3, 2024
ಕೆಪಿಎಸ್ಸಿ ಈಗಾಗಲೇ ಪ್ರಮುಖ ಸಿದ್ಧತೆಗಳನ್ನು ಮಾಡಿರುವುದರಿಂದ ಆಗಸ್ಟ್ ಅದೇ ವಾರದಲ್ಲಿ ಜಿಪಿ ಪರೀಕ್ಷೆ 2024 ಅನ್ನು ಕೆಪಿಎಸ್ಸಿ ನಡೆಸಲಿದೆ ಎಂದು ನನಗೆ ತಿಳಿಸಲಾಗಿದೆ. ಕೆಪಿಎಸ್ಸಿ ಶೀಘ್ರದಲ್ಲೇ ಹೊಸ ದಿನಾಂಕವನ್ನು ಪ್ರಕಟಿಸಲಿದೆ.