ಬೆಂಗಳೂರು : ರಾಜ್ಯದಲ್ಲಿ ಸನ್ಸೇರಾ ಕಂಪನಿ ರೂ. 2,100 ಕೋಟಿ ಹೂಡಿಕೆ ಮಾಡಲಿದ್ದು, 3,500 ಜನರಿಗೆ ಉದ್ಯೋಗವಕಾಶ ಸಿಗಲಿದೆ ಎಂದು ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಸಚಿವರು, ನಮ್ಮಸರ್ಕಾರ ದ ಉದ್ಯಮಸ್ನೇಹಿ ನೀತಿಗಳು, ಪೂರಕ ವಾತಾವರಣ ಸೃಷ್ಟಿ ಮತ್ತು ಕೌಶಲ್ಯ ಹೊಂದಿರುವ ದುಡಿಯುವ ವರ್ಗದಿಂದಾಗಿ ಕರ್ನಾಟಕವು ದೇಶದಲ್ಲೇ ಹೂಡಿಕೆದಾರರ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸನ್ಸೇರಾ ಕಂಪನಿಯು ರೂ. 2,100 ಕೋಟಿ ಹೂಡಿಕೆ ಮಾಡುತ್ತಿದೆ. ಇದರಿಂದ 3,500 ಜನ ಸ್ಥಳೀಯರಿಗೆ ಉದ್ಯೋಗ ದೊರಕುತ್ತದೆ. ಉದ್ಯಮಗಳಿಗೆ ಪೂರಕ ವಾತಾವರಣ ನಿರ್ಮಿಸಿ ಹೂಡಿಕೆ ಆಕರ್ಷಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದ್ದಾರೆ.