ಅತ್ತಿಬೆಲೆ: ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ವಿವಿಧ ಪ್ರಕರಣದಲ್ಲಿ ಭಾಗಿಯಾಗಿದ್ದಂತ ರೌಡಿ ಶೀಟರ್ ಕಾಲಿಗೆ ಗುಂಡೇಟು ನೀಡಿ, ಬಂಧಿಸಿದ್ದಾರೆ. ಈ ಮೂಲಕ 10ಕ್ಕೂ ಹೆಚ್ಚು ಕೇಸಲ್ಲಿ ಬೇಕಾಗಿದ್ದಂತ ವೆಂಕಟರಾಜು ಆಲಿಯಾಸ್ ತುಕಡಿ ಎಂಬಾತನನ್ನು ಬಂಧಿಸಲಾಗಿದೆ.
ಬೆಂಗಳೂರಿನ ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ, ಕೊಲೆಯತ್ನ ಸೇರಿದಂತೆ 10ಕ್ಕೆ ಹೆಚ್ಚು ಕೇಸಲ್ಲಿ ರೌಡಿ ಶೀಟರ್ ವೆಂಕಟರಾಜು ಆಲಿಯಾಸ್ ತುಕಡಿ ಬೇಕಾಗಿದ್ದನು. ಹಲವು ದಿನಗಳಿಂದ ತಲೆಮರಿಸಿಕೊಂಡಿದ್ದಂತ ಆರೋಪಿ, ಇಂದು ಬೆಂಗಳೂರು ನಗರದ ಆನೇಕಲ್ ತಾಲ್ಲೂಕಿನ ರಾಗಿಹಳ್ಳಿ ಬಳಿ ಇರುವಂತ ಖಚಿತ ಮಾಹಿತಿ ಜಿಗಣಿ ಠಾಣೆಗೆ ಸಿಕ್ಕಿತ್ತು.
ಕೂಡಲೇ ಅಲರ್ಟ್ ಆದಂತ ಜಿಗಣಿ ಠಾಣೆಯ ಇನ್ಸ್ ಪೆಕ್ಟರ್ ಮಂಜುನಾಥ್, ಪೊಲೀಸರ ತಂಡದೊಂದಿಗೆ ರಾಗಿಹಳ್ಳಿ ಸ್ಥಳಕ್ಕೆ ರೌಡಿ ಶೀಟರ್ ವೆಂಕಟರಾಜು ಆಲಿಯಾಸ್ ತುಕಡಿ ಎಂಬಾತನನ್ನು ಬಂಧಿಸೋದಕ್ಕೆ ತೆರಳಿದ್ದರು.
ಪೊಲೀಸರು ಬಂಧನದ ವಿಷಯ ತಿಳಿದು ಸ್ಥಳದಿಂದ ಎಸ್ಕೇಪ್ ಆಗೋದಕ್ಕಾಗಿ ಮಾರಕಾಸ್ತ್ರಗಳಿಂದ ಕ್ರೈಂ ವಿಭಾಗದ ಸಿಬ್ಬಂದಿ ವಿನಯ್ ಮೇಲೆ ದಾಳಿ ನಡೆಸಿದ್ದಾನೆ. ಈ ವೇಳೆಯಲ್ಲಿ ಜಿಗಣಿ ಠಾಣೆ ಇನ್ಸ್ ಪೆಕ್ಟರ್ ಮಂಜುನಾಥ್ ಗಾಳಿಯಲ್ಲಿ 2 ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದ್ದಾರೆ.
ಇಷ್ಟಕ್ಕೂ ಕೇಳದೇ ರೌಡಿ ಶೀಟರ್ ವೆಂಕಟರಾಜು ಪೊಲೀಸರಿಂದ ತಪ್ಪಿಸಿಕೊಳ್ಳೋದಕ್ಕೆ ಪ್ರಯತ್ನಿಸಿದ್ದಾನೆ. ಹೀಗಾಗಿ ಆತನ ಕಾಲಿಗೆ ಗುಂಡೇಟು ನೀಡಿ ಪೊಲೀಸರು ಬಂಧಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡಿರುವಂತ ರೌಡಿ ಶೀಟರ್ ವೆಂಕಟರಾಜುನನ್ನು ಸಮೀಪದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.
ಅಂದಹಾಗೇ 2 ತಿಂಗಳ ಹಿಂದೆ ಶೆಟ್ಟಿಹಳ್ಳಿ ಬಳಿಯ ಕೊಲೆಗೆ ಯತ್ನಿಸಿದಂತ ಪ್ರಕರಣದಲ್ಲಿ ವೆಂಕಟರಾಜು ಆಲಿಯಾಸ್ ತುಕಡಿ ಪ್ರಮುಖ ಆರೋಪಿಯಾಗಿದ್ದನು. ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೊಲೆ ಯತ್ನ, ಕೊಲೆ ಸೇರಿದಂತೆ 10 ಕೇಸ್ ಗಳಲ್ಲಿ ಬೇಕಾಗಿದ್ದ ಆರೋಪಿಯಾಗಿದ್ದನು. ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸೋದಕ್ಕೆ ತೆರಳಿದಾಗ ಈ ಘಟನೆ ನಡೆದಿದೆ.
BIG UPDATE: ವಯನಾಡು ಭೂಕುಸಿತ: ಘೋರ ದುರಂತಕ್ಕೆ ಬಲಿಯಾದವರ ಸಂಖ್ಯೆ 360ಕ್ಕೆ ಏರಿಕೆ | Wayanad landslides
ವೀರಶೈವ, ಲಿಂಗಾಯತ ಸಮುದಾಯದವರಿಗೆ ಗುಡ್ ನ್ಯೂಸ್: ಈ ಯೋಜನೆಗಳಿಗೆ ಅರ್ಜಿ ಆಹ್ವಾನ