ಬೆಂಗಳೂರು: ನಗರದ ಹೊರ ವಲಯದಲ್ಲಿರುವಂತ ನೈಸ್ ರಸ್ತೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬೈಕ್ ಸಂಚಾರವನ್ನು ರಾತ್ರಿಯ ವೇಳೆಯಲ್ಲಿ ನಿಷೇಧಿಸಲಾಗಿದೆ.
ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರಿಂದ ಮಾಹಿತಿ ನೀಡಲಾಗಿದ್ದು, ನೈಸ್ ರಸ್ತೆಯಲ್ಲಿ ದಿನದಿಂದ ದಿನಕ್ಕೆ ವಾಹನಗಳ ಅಪಘಾತ ಹೆಚ್ಚಾಗುತ್ತಿವೆ. ಅದರಲ್ಲೂ ದ್ವಿಚಕ್ರ ವಾಹನಗಳ ಸವಾರರು ಅಪಘಾತಕ್ಕೆ ಈಡಾಗುತ್ತಿರುವುದಾಗಿ ಕಳವಳ ವ್ಯಕ್ತ ಪಡಿಸಿದೆ.
ಈ ಹಿನ್ನಲೆಯಲ್ಲಿ ಅಪಘಾತಗಳನ್ನು ನಿಯಂತ್ರಿಸುವ ದೃಷ್ಟಿಯಿಂದ ರಾತ್ರಿ 10 ರಿಂದ ಬೆಳಿಗ್ಗೆ 5ರ ವರೆಗೆ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಹೀಗಾಗಿ ದ್ವಿಚಕ್ರ ವಾಹನ ಸವಾರರು ಸಹಕರಿಸುವಂತೆ ಕೋರಿದೆ.
ನೈಸ್ ರಸ್ತೆಯಲ್ಲಿ ದಿನದಿಂದ ದಿನಕ್ಕೆ ಅಪಘಾತಗಳು ಹೆಚ್ಚುತ್ತಿರುವ ಹಿನ್ನೆಲೆ ನಿಯಂತ್ರಣದ ದೃಷ್ಟಿಯಿಂದ ರಾತ್ರಿ 10 ರಿಂದ ಬೆಳಿಗ್ಗೆ 5ರ ವರೆಗೆ ದ್ವಿಚಕ್ರ ವಾಹನಗಳ ಸಂಚಾರ ನಿಷೇಧಿಸಲಾಗಿದೆ.#safedriving@CMofKarnataka @siddaramaiah pic.twitter.com/I0Q2dy5rxh
— DIPR Karnataka (@KarnatakaVarthe) August 3, 2024
‘ಬಂಡೀಪುರ ಹುಲಿ ಅಭಯಾರಣ್ಯ’ದಲ್ಲಿ ವಿಭಿನ್ನ ಬಣ್ಣದ ಕಣ್ಣುಗಳ ‘ಚಿರತೆ’ ಕ್ಯಾಮೆರಾದಲ್ಲಿ ಸೆರೆ!
ಸಿದ್ದರಾಮಯ್ಯರಿಗೆ ಕಂಟಕ ಇದೆ, ‘ಕಂಬಳಿ’ ಹೊದ್ದುಕೊಂಡರೆ ಕಷ್ಟಗಳೆಲ್ಲ ನಿವಾರಣೆ : ಅಭಿಮಾನಿಯ ಮನದಾಳದ ಮಾತು