ಯಾದಗಿರಿ: ಜಿಲ್ಲೆಯ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿಎಸ್ಐ ಪರಶುರಾಮ್ ಅವರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಅವರ ಸಾವಿಗೆ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಪುತ್ರ ಪಂಪನಗೌಡ ಕಾರಣ. ಅವರನ್ನು ವಶಕ್ಕೆ ಪಡೆದು ಜೈಲಿಗೆ ಹಾಕುವಂತೆ ಪಿಎಸ್ಐ ಪತ್ನಿ ಶ್ವೇತಾ ಒತ್ತಾಯಿಸಿದ್ದಾರೆ.
ಇಂದು ಪತಿಯನ್ನು ಕಳೆದುಕೊಂಡ ನೋವಿನಲ್ಲಿದ್ದಂತ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಆರೋಪಿಗಳಾದಂತ ಶಾಸಕ ಚೆನ್ನಾರೆಡ್ಡಿ ಪಾಟೀಲ್, ಅವರ ಪುತ್ರ ಪಂಪನಗೌಡ ಅವರೇ ಪಿಎಸ್ಐ ಪರಶುರಾಮ್ ಸಾವಿಗೆ ಕಾರಣ. ನನ್ನ ಪತಿಗೆ ಶಾಸಕ ಹಾಗೂ ಅವರ ಪುತ್ರ ಒತ್ತಡ ಹೇರಿದ್ದರು ಎಂಬುದಾಗಿ ಆರೋಪಿಸಿದರು.
ನನ್ನ ಪತಿ ಸಾವಿಗೆ ಕಾರಣವಾದಂತ ಶಾಸಕ ಚೆನ್ನಾರೆಡ್ಡಿ ಹಾಗೂ ಅವರ ಪುತ್ರ ಪಂಪನಗೌಡನನ್ನು ಜೈಲಿಗಟ್ಟಬೇಕು. ಅವರು ಜೈಲಿಗೆ ಹೋಗುವುದನ್ನು ನಾನು, ನನ್ನ ಮಗ ನೋಡಬೇಕು ಎಂಬುದಾಗಿ ಹೇಳಿದರು.
BREAKING : ಯಾದಗಿರಿ ‘PSI’ ಅನುಮಾನಾಸ್ಪದ ಸಾವು ಕೇಸ್ : ಶಾಸಕ ಚೆನ್ನಾರೆಡ್ಡಿ, ಪುತ್ರನ ವಿರುದ್ಧ ದೂರು ದಾಖಲು
ಸಿದ್ದರಾಮಯ್ಯರಿಗೆ ಕಂಟಕ ಇದೆ, ‘ಕಂಬಳಿ’ ಹೊದ್ದುಕೊಂಡರೆ ಕಷ್ಟಗಳೆಲ್ಲ ನಿವಾರಣೆ : ಅಭಿಮಾನಿಯ ಮನದಾಳದ ಮಾತು