ರಾಮನಗರ: ಜಿಲ್ಲೆಯಲ್ಲಿ ಬಿಜೆಪಿ ಸರ್ಕಾರದ ಆಡಳಿತದ ಅವಧಿಯಲ್ಲಿ ಒಂದೇ ಒಂದು ಮನೆ ಕಟ್ಟಿಕೊಟ್ಟಿಲ್ಲ. ನಾವು 2,000 ಮನೆ ಮಂಜೂರು ಮಾಡಿ, ಕಟ್ಟಿಸಿಕೊಟ್ಟಿದ್ದೇವೆ. ಬಿಜೆಪಿಯವರು ಮನೆ ಕಟ್ಟಿಸಿಕೊಟ್ಟಿರೋದು ಸಾಭೀತು ಮಾಡಿದ್ರೇ ನಾನು ರಾಜಕೀಯ ನಿವೃತ್ತಿ ಆಗುವುದಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಸವಾಲು ಹಾಕಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಜಿಲ್ಲೆಯಲ್ಲಿ ಆಗಿಲ್ಲ. ಮನೆಯ ನಿರ್ಮಾಣ ವಿಚಾರದಲ್ಲಿ ಅಂತೂ ಇಲ್ಲವೇ ಇಲ್ಲ ಎಂಬುದಾಗಿ ಕಿಡಿಕಾರಿದರು.
ರಾಮನಗರ ಜಿಲ್ಲೆಯಲ್ಲಿ ಹಿಂದಿನ ಬಿಜೆಪಿ ಅವಧಿಯ ಸರ್ಕಾರದಲ್ಲಿ ಮನೆಯನ್ನು ಕಟ್ಟಿಲ್ಲ. ಮನೆ ನಿರ್ಮಿಸಿಕೊಡಲಾಗಿದೆ ಎಂಬುದು ಸುಳ್ಳು. ನಮ್ಮ ಸರ್ಕಾರದ ಅವಧಿಯಲ್ಲೇ ಇಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ ಅಂತ ತಿಳಿಸಿದರು.
ಪರಶುರಾಮ್ ಸಾವು ಕೇಸ್: ಶಾಸಕ ಚೆನ್ನಾರೆಡ್ಡಿ, ಪುತ್ರನನ್ನು ಬಂಧಿಸಿ ಜೈಲಿಗಟ್ಟಿ- PSI ಪತ್ನಿ ಶ್ವೇತ ಒತ್ತಾಯ
BREAKING : ಯಾದಗಿರಿ ‘PSI’ ಅನುಮಾನಾಸ್ಪದ ಸಾವು ಕೇಸ್ : ಶಾಸಕ ಚೆನ್ನಾರೆಡ್ಡಿ, ಪುತ್ರನ ವಿರುದ್ಧ ದೂರು ದಾಖಲು