ನ್ಯೂಯಾರ್ಕ್: 2001ರ ಸೆಪ್ಟಂಬರ್ 11ರ ಭಯೋತ್ಪಾದಕ ದಾಳಿಯ ಸಂಚು ರೂಪಿಸಿದ್ದ ಮೂವರು ಆರೋಪಿಗಳೊಂದಿಗೆ ಮಾಡಿಕೊಂಡಿದ್ದ ವಿಚಾರಣೆ ಪೂರ್ವ ಒಪ್ಪಂದವನ್ನು ಅಮೆರಿಕ ಸರಕಾರ ರದ್ದುಪಡಿಸಿದೆ.
ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರು ಯುದ್ಧ ನ್ಯಾಯಾಲಯದ ಕಲಾಪಗಳ ಮೇಲ್ವಿಚಾರಣೆ ನಡೆಸುತ್ತಿರುವ ಅಧಿಕಾರಿ ಸುಸಾನ್ ಎಸ್ಕಲಿಯರ್ ಅವರಿಗೆ ಜ್ಞಾಪಕ ಪತ್ರವನ್ನು ಕಳುಹಿಸಿದ್ದಾರೆ.
“ಆರೋಪಿಗಳೊಂದಿಗೆ ವಿಚಾರಣೆ ಪೂರ್ವ ಒಪ್ಪಂದಗಳನ್ನು ಮಾಡಿಕೊಳ್ಳುವ ನಿರ್ಧಾರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು ನಾನು ನಿರ್ಧರಿಸಿದ್ದೇನೆ . ಅಂತಹ ನಿರ್ಧಾರದ ಜವಾಬ್ದಾರಿಯು ಉನ್ನತ ಅಧಿಕಾರಿಯಾಗಿ ನನ್ನ ಮೇಲಿರಬೇಕು” ಎಂದು ಆಸ್ಟಿನ್ ಮೆಮೋದಲ್ಲಿ ಬರೆದಿದ್ದಾರೆ.