ಶಿವಮೊಗ್ಗ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಲ್ಲಿ ಜೋಗದ ಜಲಪಾತ ಕೂಡ ಒಂದಾಗಿದೆ. ಈ ಜಲಪಾತವನ್ನು ಸರ್ವಋತು ಪ್ರವಾಸಿ ತಾಣವಾಗಿ ಅಭಿವೃದ್ಧಿ ಮಾಡುವುದಕ್ಕೆ ಒತ್ತು ನೀಡಲಾಗುತ್ತದೆ ಅಂತ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದ್ದಾರೆ.
ಗುರುವಾರದಂದು ಲಿಂಗನಮಕ್ಕಿ ಡ್ಯಾಂನಿಂದ ಶರಾವತಿ ನದಿಗೆ ಗೇಟ್ ಓಪನ್ ಮಾಡುವ ಮೂಲಕ ನೀರು ಬಿಡುವುದಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ವಋತು ಪ್ರವಾಸಿತಾಣವಾಗಿ ಜೋಗ ಜಲಾಶಯ ಅಭಿವೃದ್ಧಿ ಪಡಿಸಲಾಗುವುದು. ಸುಂದರ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ₹183 ಕೋಟಿ ಯೋಜನೆಯ ಕಾಮಗಾರಿ ಚಾಲನೆಯಲ್ಲಿದ್ದು, ₹30 ಕೋಟಿ ಅನುದಾನ ಬಿಡುಗಡೆಯಾಗಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಜೊತೆ ಮನರಂಜನೆ ನೀಡಲು ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಗೆ ಅಧ್ಯಯನ ಪ್ರವಾಸ ಕೈಗೊಳ್ಳಲಾಗುವುದು ಎಂದು ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ಅಂದಹಾಗೇ ಲಿಂಗನಮಕ್ಕಿ ಡ್ಯಾಂನಿಂದ ಇಂದು 8 ಗೇಟ್ ಓಪನ್ ಮಾಡಿ ಶರಾವತಿ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಹೀಗಾಗಿ ಜೋಗದ ಜಲಪಾತದ ಸೊಬಗು ಮತ್ತಷ್ಟು ಹೆಚ್ಚಾಗಿದ್ದು, ಪ್ರವಾಸಿಗರ ದಂಡೇ ಜೋಗದ ಸಿರಿಯಲ್ಲಿ ಸೇರಿರುವುದು ಕಂಡು ಬಂದಿದೆ.
ಸರ್ವಋತು ಪ್ರವಾಸಿತಾಣವಾಗಿ ಜೋಗ ಜಲಾಶಯ ಅಭಿವೃದ್ಧಿ ಪಡಿಸಲಾಗುವುದು. ಸುಂದರ ಪ್ರವಾಸಿ ತಾಣವಾಗಿಸುವ ನಿಟ್ಟಿನಲ್ಲಿ ₹183 ಕೋಟಿ ಯೋಜನೆಯ ಕಾಮಗಾರಿ ಚಾಲನೆಯಲ್ಲಿದ್ದು, ₹30 ಕೋಟಿ ಅನುದಾನ ಬಿಡುಗಡೆಯಾಗಿದೆ. ಒಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಪ್ರವಾಸಿಗರಿಗೆ ಮೂಲಭೂತ ಸೌಕರ್ಯಗಳ ಜೊತೆ ಮನರಂಜನೆ ನೀಡಲು ಹೈದರಾಬಾದ್‌ನ ರಾಮೋಜಿ… pic.twitter.com/NeFfeExMGT
— DIPR Karnataka (@KarnatakaVarthe) August 2, 2024
50,000 ಕೋಟಿ ಮೌಲ್ಯದ ‘8 ಹೈಸ್ಪೀಡ್ ರಸ್ತೆ ಕಾರಿಡಾರ್ ಯೋಜನೆ’ಗಳಿಗೆ ‘ಕೇಂದ್ರ ಸಚಿವ ಸಂಪುಟ ಸಭೆ’ ಅನುಮೋದನೆ
ಸಾಗರ ತಾಲ್ಲೂಕಲ್ಲಿ ‘ಮಳೆಹಾನಿ’: ಅಧಿಕಾರಿಗಳಿಗೆ ಈ ಖಡಕ್ ಸೂಚನೆ ಕೊಟ್ಟ ‘ಶಾಸಕ ಬೇಳೂರು ಗೋಪಾಲಕೃಷ್ಣ’