Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING: IPL ಮೊದಲ ಎರಡು ಪ್ಲೇಆಫ್ ಪಂದ್ಯ ಮುಲ್ಲನ್ ಪುರದಲ್ಲಿ, ಫೈನಲ್ ಪಂದ್ಯ ಅಹಮದಾಬಾದ್ ನಲ್ಲಿ ನಿಗದಿ

20/05/2025 6:16 PM

BREAKING: ಮೇ.23ರಂದು ಬೆಂಗಳೂರಲ್ಲಿ ನಡೆಯಬೇಕಿದ್ದ IPL ಪಂದ್ಯ ಲಖನೌಗೆ ಶಿಫ್ಟ್ | IPL Match 2025

20/05/2025 6:13 PM

BIG NEWS : ರಾಜ್ಯದಲ್ಲಿ ರಣಚಂಡಿ ಮಳೆಗೆ ಮತ್ತೊಂದು ಬಲಿ : ಧಾರವಾಡದಲ್ಲಿ ಸಿಡಿಲು ಬಡಿದು ಯುವಕ ಸಾವು!

20/05/2025 6:09 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ‘ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ’ಯ ‘ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ‌’ ಪ್ರದಾನ
KARNATAKA

‘ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ’ಯ ‘ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ‌’ ಪ್ರದಾನ

By kannadanewsnow0902/08/2024 8:03 PM

ಬೆಂಗಳೂರು: ಇಂದು ನಗರದ ಸರ್ಕಾರಿ ನೌಕರರ ಸಚಿವಾಲಯದ ಕ್ಲಬ್ ಆವರಣದಲ್ಲಿ ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿಯ ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ‌ ಪ್ರದಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ವಿವಿಧ ಗಣ್ಯರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಲಾಯಿತು.

ಈ ಬಳಿಕ ಮಾತನಾಡಿದಂತ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಸಾರ್ವಜನಿಕ ಸಂಪರ್ಕ ಕ್ಷೇತ್ರವು ಎಲ್ಲಾ ವಲಯಗಳಲ್ಲೂ ಅತೀ ಪ್ರಮುಖ ಅಂಗವಾಗಿ ಇಂದು ಗುರುತಿಸಿಕೊಂಡಿದೆ. ಯಾವಿದೇ ಸಚಿವರ ಅಥವಾ ಸಮಾಜದಲ್ಲಿನ ಗಣ್ಯ ವ್ಯಕ್ತಿಗಳ ಗುರುತಿವಿಕೆ ಅವರ PR ಅವರ ಮೇಲೆ ಅಳೆಯಲಾಗುತ್ತದೆ. ಸಂವಹನ ಬಹಳ ಮುಖ್ಯ. ಮೊದಲು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ಬಹಳಷ್ಟು ಸ್ವಾತಂತ್ರ್ಯ ಇತ್ತು. ಈಗ ಮಾಧ್ಯಮಗಳಲ್ಲಿ ನಿರ್ಭೀತಿಯಿಂದ ಹಾಗೂ ನಿಷ್ಪಕ್ಷಪಾತವಾಗಿ ವರದಿ ಮಾಡುವ ಸಂದರ್ಭವಿಲ್ಲ. ಎಲ್ಲಾ ಮಾಧ್ಯಮಗಳಲ್ಲಿ ಸಮತೋಲಿತ ವರದಿಗಳು ಬರಬೇಕು ಎಂದು ಹೇಳಿದರು.

ಮಾಧ್ಯಮಗಳಲ್ಲಿ ಸಂಪಾದಕರಿಗೆ ಪೂರ್ತಿ ಸ್ವಾತಂತ್ರ್ಯ ನೀಡಬೇಕು. ಆಗ ಮಾತ್ರ ನೈಜವಾಗಿ ಮಾಧ್ಯಮಗಳು ಕೆಲಸ ಮಾಡಲು ಸಾಧ್ಯ. ಸಾರ್ವಜನಿಕ ಸಂಪರ್ಕದ ವಿಷಯದಲ್ಲಿ ಸಾರಿಗೆ ವಿಷಯದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿ ಅವರ ಕೆಲಸ ಯಶಸ್ವಿಯಾಗಿ ನಡೆಯುತ್ತಿದ್ದರೆ ಆ ಸಂಸ್ಥೆಗಳು ಸಾರ್ವಜನಿಕ ಹತ್ತಿರವಾಗುತ್ತವೆ. ಹಾಗಾಗಿ ಸಾರಿಗೆ ಇಲಾಖೆಯ ಎಲ್ಲಾ ನಿಗಮಗಳಿಗೆ 500ಕ್ಕೂ ಹೆಚ್ಚು ಪ್ರಶಸ್ತಿಗಳು ಬಂದಿವೆ ಎಂದರು.

ಕೆಎಸ್ ಆರ್ ಟಿಸಿ ಸಂಸ್ಥೆಯೊಂದಕ್ಕೆ 356 ಪ್ರಶಸ್ತಿಗಳು ಬಂದಿವೆ. ಸಂವಹನ ಪ್ರಶಸ್ತಿಗೆ ಭಾಜನರಾದ ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ನ್ಯಾಯಮೂರ್ತಿ  ಡಾ. ಶ್ರೀ ಶಾಸ್ತ್ರಿ ರವರು ಮಾತನಾಡಿ ಪುರಾಣ ಕಾಲದಿಂದಲೂ ಸಾರ್ವಜನಿಕ ಸಂಪರ್ಕ ಕ್ಷೇತ್ರವಿದೆ ಆದರೆ ಅದರ‌ಪಾತ್ರಗಳು ಭಿನ್ನವಾಗಿದ್ದವು. ರಾಮಾಯಾಣ ,ಮಹಾಭಾರತ ದಲ್ಲಿ‌ ಕೂಡ ಸಂವಹನ ಸಾರ್ವಜನಿಕ ಸಂಪರ್ಕವಿತ್ತು. ಒಂದು ಮನೆಯಲ್ಲಿ ತಾಯಿ ಆ ಮನೆಗೆ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ, ಈಗ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲರೂ, ಎಲ್ಲದಕ್ಕೂ ಪಿಆರ್ ಕೆಲಸ ಮಾಡುವುದರಲ್ಲಿ ಯಶಸ್ವಿಯಾಗಿದ್ದಾರೆ. ಜೀವನದ ಎಲ್ಲಾ ವಲಯಗಳಲ್ಲಿ ಸಾರ್ವಜನಿಕ ಸಂಪರ್ಕ ಮುಖ್ಯವಾಗಿದೆ. ಕಾರ್ಪೊರೇಟ್ ವಲಯದಲ್ಲಂತೂ ಈ ಕ್ಷೇತ್ರದಿಂದಲೇ ಆ ಸಂಸ್ಥೆಯ ಮೌಲ್ಯ ಹೆಚ್ಚಾಗಿದೆ. ಪಿಆರ್ ಸಿಐ ಮಾಧ್ಯಮ ಕ್ಷೇತ್ರಕ್ಕೆ ಹಾಗೂ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿದೆ ಎಂದರು.

ಮಾಧ್ಯಮ ಶಿಕ್ಷಣ ಕ್ಷೇತ್ರದಲ್ಲಿ ಎರಡು ದಶಕಗಳಿಂದ ಪಿಆರ್ ಸಿಐ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಲೇ ಬಂದಿದೆ. ಪಿಆರ್ ಸಿಐ ಕೊಡ ಮಾಡುವ ರಾಷ್ಟ್ರ ಮಟ್ಟದ ಚಾಣಿಕ್ಯ ಪ್ರಶಸ್ತಿಗೆ ದೇಶದಲ್ಲಿ ಬಹಳಷ್ಟು ಮೌಲ್ಯವಿದೆ. ಮಾಧ್ಯಮ ಕ್ಷೇತ್ರದಲ್ಲಿ ಹಾಗೂ ಮಾಧ್ಯಮ ಶಿಕ್ಷಣದಲ್ಲಿ, ರಂಗಭೂಮಿ, ಚಲನಚಿತ್ರ, ಎಲೆಕ್ಟ್ರಾನಿಕ್ ಕೆಲಸ ಮಾಡುವವರಿಗೂ ಪಿಆರ್ ಸಿಐ ರಾಜ್ಯ ಮಟ್ಟದ ಸಂವಹನ ಪ್ರಶಸ್ತಿ ನೀಡುತ್ತಾ ಬಂದಿದೆ. ಮಾಧ್ಯಮ ಶಿಕ್ಷಣ ಹಾಗೂ ಮಾಧ್ಯಮ ಕ್ಷೇತ್ರದ ನಡುವಿನ ದೊಡ್ಡ ಕಂದಕ ನಿವಾರಣೆಯಾಗಲೆಂದು ಸಂವಹನ ಪ್ರಶಸ್ತಿಯನ್ನು ಪಿಆರ್ ಸಿಐ ನೀಡುತ್ತಾ ಬಂದಿದೆ. ಎಂದು ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಡಾ.ಬಿ.ಕೆ.ರವಿ ಅಭಿಪ್ರಾಯಪಟ್ಟಿದ್ದಾರೆ.

ಪಿಆರ್ ಸಿಐ ಸಂಸ್ಥಾಪಕರಾದ ಜಯರಾಮ್ ಅವರು ಮಾತನಾಡಿ, ದೇಶದಲ್ಲಿ 59 ಚಾಪ್ಟರ್ ಇದೆ. ನಾನು ಕಿರುತೆರೆಯಲ್ಲಿ, ಪತ್ರಕರ್ತನಾಗಿ ಹಾಗೂ ಸಾರ್ವಜನಿಕ‌ ಸಂಪರ್ಕಾಧಿಕಾರಿಯಾಗಿ ಕೆಲಸ ಮಾಡಿದ್ದೇನೆ. ಸಮಾಜದಲ್ಲಿ‌ ಸಾರ್ವಜನಿಕ ಸಂಪರ್ಕಾಧಿಕಾರಿಯ ಹುದ್ದೆ ಮಹತ್ವದ್ದಾಗಿದೆ ಎಂದರು.

ಪಿಆರ್ ಸಿಐನಲ್ಲಿ 80 ವಿವಿಧ ವಲಯಗಳ ಕ್ಷೇತ್ರಗಳ ತಜ್ಞರಿದ್ದಾರೆ. ನವೆಂಬರ್ ನಲ್ಲಿ ಮಂಗಳೂರಿನಲ್ಲಿ ಪಿಆರ್ ಸಿಐ ಜಾಗತಿಕ ಸಮಾವೇಶ ಆಯೋಜಿಸುತ್ತಿದ್ದೇವೆ. ಅದರಲ್ಲಿ ಜಗತ್ತಿನಾದ್ಯಂತ 500ಕ್ಕೂ ಹೆಚ್ಚು ಗಣ್ಯರು ಆಗಮಿಸುತ್ತಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ವೇಣುಗೋಪಾಲ್ ಮಾತನಾಡುತ್ತಾ, ಈಗೀಗ ನ್ಯಾಯಾಂಗ ಕ್ಷೇತ್ರದಲ್ಲೂ ಪಿಆರ್ ವಿಭಾಗವಿದೆ, ಸಾರ್ವಜನಿಕ ಸಂಪರ್ಕಾಧಿಕಾರಿಗಳಿಗೆ ಹೆಚ್ಚಿನ ಅವಕಾಶ ಸಿಗಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಮ್ ಮಾತನಾಡಿ, ಸಾರ್ವಜನಿಕ ಸಂಪರ್ಕಾಧಿಕಾರಿ ಹುದ್ದೆಯು ಜವಾಬ್ದಾರಿಯುತವಾಗಿದೆ. ಥ್ಯಾಂಕ್ಸ್ ಲೆಸ್ ಕ್ಷೇತ್ರವಾಗಿದೆ. ಪ್ರಮಾಣಿಕವಾಗಿ, ಉತ್ತಮವಾಗಿ ವೃತ್ತಿಪರವಾಗಿ ಕೆಲಸ ಮಾಡುತ್ತಿರುವ ಪಿಆರ್ ಆಗಿರುವವರನ್ನು ಅಭಿನಂದಿಸುತ್ತೇನೆ ಎಂದರು. ಇತ್ತೀಚಿನ ದಿನಗಳಲ್ಲಿ ಹಿಂದಿನಂತಿಲ್ಲ. ಪಿಆರ್ ಅಧಿಕಾರಿಗಳು ತಂತ್ರಜ್ಞಾನವನ್ನು ಅಳವಡಿಸಿಕೊಂಡು, ಪತ್ರಕರ್ತರೊಂದಿಗೆ ವೈಯುಕ್ತಿಕ ಸಂಬಂಧ ಎಂಬುದಿಲ್ಲ. ಇವತ್ತು ನೀಡಿರುವ ರಾಜ್ಯ ಮಟ್ಟದ ಸಂವಹನ ಪ್ರಶಸ್ತಿಯಲ್ಲಿ ಸರ್ಕಾರ ನೀಡಿರುವ ಪ್ರಶಸ್ತಿಯಲ್ಲಿರುವಂತೆ ರಾಜಕೀಯ ಇರುವುದಿಲ್ಲ ಎಂದು ತಿಳಿಸಿದರು.

ಸಮಾರಂಭದಲ್ಲಿ ಡಾ.ಲತಾ ಟಿ.ಎಸ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಕೆ‌ಎಸ್ ಆರ್ ಟಿ ಸಿ‌, ಉಪಾಧ್ಯಕ್ಷರು, ಭಾರತೀಯ ಸಾರ್ವಜನಿಕ ಸಂಪರ್ಕ ಮಂಡಳಿ, ರಾಮಕೃಷ್ಣ, ಅಧ್ಯಕ್ಷರು ಬೆಂಗಳೂರು ವಲಯ ಪಿಆರ್ ಸಿಐ, ಸ್ವಾಮಿ, ಆನಂದ್, ಚಿನ್‌ಯ್ ಪ್ರವೀಣ್ ಉಪಸ್ಥಿತರಿದ್ದರು.

ಹೀಗಿದೆ ಪ್ರಶಸ್ತಿ ಪುರಸ್ಕೃತರ ಪಟ್ಟಿ

ಡಿ ಪಿ ಮುರುಳಿಧರ್, ನಿವೃತ್ತ ನಿರ್ದೇಶಕರು, ಸಾರ್ವಜನಿಕ ಸಂಪರ್ಕ ಇಲಾಖೆ.

ಸುದರ್ಶನ ಚನ್ನಂಗಿಹಳ್ಳಿ, ಮುಖ್ಯ ಸಂಪಾದಕರು, ವಿಜಯ ಕರ್ನಾಟಕ.

ಬಿ ಎಸ್ ಸತೀಶ್ ಕುಮಾರ್, ಬ್ಯೂರೋ ಉಪಮುಖ್ಯಸ್ಥರು ಹಾಗೂ ಹಿರಿಯ ಉಪ ಸಂಪಾದಕರು, ದ ಹಿಂದು.

ರಜಿನಿ ಎಂ ಜಿ, ಮೆಟ್ರೋ ಮುಖ್ಯಸ್ಥೆ, ಏಷ್ಯಾನೆಟ್ ಸುವರ್ಣ ನ್ಯೂಸ್.

ಡಾ. ರಾಜೇಶ್ವರಿ ತಾರೇಶ್, ಅಸೋಸಿಯೇಟ್ ಪ್ರೊಫೆಸರ್, ಮಾಧ್ಯಮ ವಿದ್ಯುನ್ಮಾನ ಇಲಾಖೆ, ಬೆಂಗಳೂರು ವಿಶ್ವವಿದ್ಯಾನಿಲಯ.

ಅಲ್ವಿನ್ ಮೆಂಡೊಂಕ, ಅಧ್ಯಕ್ಷರು, ಕರ್ನಾಟಕ ಮಾಧ್ಯಮ ಸಮಿತಿ.

ರಾವಣನ್ ರಾಘವೇಂದ್ರ, ಸಾರ್ವಜನಿಕ ಸಂಪರ್ಕ ಅಧಿಕಾರಿ.

ಡಾ. ಸಂದೇಶ್ ನಾಗರಾಜ್, ಸಂಯೋಜಕರು ಹಾಗೂ ಕಲಾವಿದರು.

ಶ್ಯಾಮ್ ಎಸ್, ಸಂಪಾದಕರು, ಬೆಂಗಳೂರು ವೈರ್.

ಎಸ್ ಕವಿತಾ, ಅಧ್ಯಕ್ಷರು, ಕಲೆ ಮತ್ತು ಕರಕುಶಲ ಕಾರ್ಮಿಕ ಸಂಘ, ಬಿಬಿಎಂಪಿ.

ಕುಮಾರಿ ಪ್ರಾಚಿ ಗೌಡ, ಅಧ್ಯಕ್ಷರು, ಯುವ ಬಲ ಜಾಗೃತಿ ಪರಿಷತ್, ಯುವ ಸಬಲೀಕರಣ.

ಕುಮಾರಿ ರಮ್ಯಾ ಜೋಶಿ, ಕಥೆ ನಿರ್ಮಾಪಕರು, ವೈಸಿಸಿ

BREAKING: ರಾಜ್ಯ ಸರ್ಕಾರದಿಂದ ‘ಮಳೆಹಾನಿ’ಯಿಂದ ಮನೆ ಕಳೆದುಕೊಂಡವರಿಗೆ ಗುಡ್ ನ್ಯೂಸ್: ಪರಿಹಾರ ಧನ ಹೆಚ್ಚಳ

BREAKING: ಪ್ಯಾರಿಸ್ ಒಲಂಪಿಕ್ಸ್ 2024: ಆಸ್ಟ್ರೇಲಿಯಾ ಮಣಿಸಿ, ಭಾರತದ ಪುರುಷರ ಹಾಕಿ ತಂಡ ಭರ್ಜರಿ ಗೆಲುವು | Paris Olympics 2024

Share. Facebook Twitter LinkedIn WhatsApp Email

Related Posts

BREAKING: ಮೇ.23ರಂದು ಬೆಂಗಳೂರಲ್ಲಿ ನಡೆಯಬೇಕಿದ್ದ IPL ಪಂದ್ಯ ಲಖನೌಗೆ ಶಿಫ್ಟ್ | IPL Match 2025

20/05/2025 6:13 PM1 Min Read

BIG NEWS : ರಾಜ್ಯದಲ್ಲಿ ರಣಚಂಡಿ ಮಳೆಗೆ ಮತ್ತೊಂದು ಬಲಿ : ಧಾರವಾಡದಲ್ಲಿ ಸಿಡಿಲು ಬಡಿದು ಯುವಕ ಸಾವು!

20/05/2025 6:09 PM1 Min Read

ಮೇ.25ರಂದು UPSC ಪರೀಕ್ಷೆ: ಬೆಂಗಳೂರಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ

20/05/2025 5:53 PM1 Min Read
Recent News

BREAKING: IPL ಮೊದಲ ಎರಡು ಪ್ಲೇಆಫ್ ಪಂದ್ಯ ಮುಲ್ಲನ್ ಪುರದಲ್ಲಿ, ಫೈನಲ್ ಪಂದ್ಯ ಅಹಮದಾಬಾದ್ ನಲ್ಲಿ ನಿಗದಿ

20/05/2025 6:16 PM

BREAKING: ಮೇ.23ರಂದು ಬೆಂಗಳೂರಲ್ಲಿ ನಡೆಯಬೇಕಿದ್ದ IPL ಪಂದ್ಯ ಲಖನೌಗೆ ಶಿಫ್ಟ್ | IPL Match 2025

20/05/2025 6:13 PM

BIG NEWS : ರಾಜ್ಯದಲ್ಲಿ ರಣಚಂಡಿ ಮಳೆಗೆ ಮತ್ತೊಂದು ಬಲಿ : ಧಾರವಾಡದಲ್ಲಿ ಸಿಡಿಲು ಬಡಿದು ಯುವಕ ಸಾವು!

20/05/2025 6:09 PM

ಭಾರತದಲ್ಲಿ ಐಫೋನ್ ತಯಾರಕ ಆಪಲ್‌ನ ಪೂರೈಕೆದಾರ ಫಾಕ್ಸ್‌ಕಾನ್ 12800 ಕೋಟಿ ರೂ ಹೂಡಿಕೆ

20/05/2025 5:57 PM
State News
KARNATAKA

BREAKING: ಮೇ.23ರಂದು ಬೆಂಗಳೂರಲ್ಲಿ ನಡೆಯಬೇಕಿದ್ದ IPL ಪಂದ್ಯ ಲಖನೌಗೆ ಶಿಫ್ಟ್ | IPL Match 2025

By kannadanewsnow0920/05/2025 6:13 PM KARNATAKA 1 Min Read

ಬೆಂಗಳೂರು: ನಗರದಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯ ಕಾರಣದಿಂದ ಅಲ್ಲಲ್ಲಿ ಜಲಾವೃತಗೊಂಡು ಜನರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಇನ್ನೂ ಐದು ದಿನ ಮಳೆಯಾಗುವ…

BIG NEWS : ರಾಜ್ಯದಲ್ಲಿ ರಣಚಂಡಿ ಮಳೆಗೆ ಮತ್ತೊಂದು ಬಲಿ : ಧಾರವಾಡದಲ್ಲಿ ಸಿಡಿಲು ಬಡಿದು ಯುವಕ ಸಾವು!

20/05/2025 6:09 PM

ಮೇ.25ರಂದು UPSC ಪರೀಕ್ಷೆ: ಬೆಂಗಳೂರಲ್ಲಿ ಪರೀಕ್ಷಾ ಕೇಂದ್ರದ ಸುತ್ತಮುತ್ತ ನಿಷೇಧಾಜ್ಞೆ ಜಾರಿ

20/05/2025 5:53 PM

ಶಿವಮೊಗ್ಗ: ಮೇ.22ರಂದು ನಗರದ ಈ ಪ್ರದೇಶಗಳಲ್ಲಿ ‘ವಿದ್ಯುತ್ ವ್ಯತ್ಯಯ’ | Power Cut

20/05/2025 5:44 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.