ನವದೆಹಲಿ : ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಮುಂಬರುವ ಇಂಡೋ-ಯುಎಸ್ ಮಿಷನ್’ನಲ್ಲಿ ಹಾರಾಟ ನಡೆಸುವ ಪ್ರಧಾನ ಗಗನಯಾತ್ರಿಯಾಗಿ ಇಸ್ರೋ ತನ್ನ ನಿಯೋಜಿತ ಗಗನಯಾತ್ರಿಗಳಲ್ಲಿ ಕಿರಿಯರನ್ನ ಆಯ್ಕೆ ಮಾಡಿದೆ. ಇತ್ತೀಚೆಗೆ ಬಡ್ತಿ ಪಡೆದ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರು ಪ್ರಧಾನ ಗಗನಯಾತ್ರಿಯಾಗಲಿದ್ದಾರೆ.
ಶುಕ್ಲಾ ಅವರು ಅಕ್ಟೋಬರ್ 10, 1985 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಜನಿಸಿದರು. ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದು, ಜೂನ್ 17, 2006ರಂದು ಭಾರತೀಯ ವಾಯುಪಡೆಯ (IAF) ಫೈಟರ್ ಸ್ಟ್ರೀಮ್ನಲ್ಲಿ ನಿಯೋಜಿಸಲ್ಪಟ್ಟರು.
ಅವರು ಫೈಟರ್ ಕಾಂಬ್ಯಾಟ್ ಲೀಡರ್ ಮತ್ತು ಸುಮಾರು 2,000 ಗಂಟೆಗಳ ಹಾರಾಟದ ಅನುಭವವನ್ನ ಹೊಂದಿರುವ ಟೆಸ್ಟ್ ಪೈಲಟ್ ಆಗಿದ್ದಾರೆ. ಅವರು ಸುಖೋಯ್ -30 ಎಂಕೆಐ, ಮಿಗ್ -21, ಮಿಗ್ -29, ಜಾಗ್ವಾರ್, ಹಾಕ್, ಡಾರ್ನಿಯರ್ ಮತ್ತು ಎಎನ್ -32 ಸೇರಿದಂತೆ ವಿವಿಧ ವಿಮಾನಗಳನ್ನ ಹಾರಿಸಿದ್ದಾರೆ.
ಉದ್ಯೋಗಿಗಳಿಗೆ ಸಿಹಿ ಸುದ್ದಿ ; ‘EPFO’ ಹೊಸ ಮಾರ್ಗಸೂಚಿ, ಈಗ ‘ವೈಯಕ್ತಿಕ ವಿವರ’ ಸರಿಪಡಿಸೋದು ತುಂಬಾ ಸುಲಭ
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಮರ್ಪಕ ಸಂಗ್ರಹ: ಸಚಿವ ಪ್ರಿಯಾಂಕ್ ಖರ್ಗೆ ಅಸಮಧಾನ
BIGG NEWS : ‘ಮುಕೇಶ್ ಅಂಬಾನಿ’ ಹಿಂದಿಕ್ಕಿದ ‘ಗೌತಮ್ ಅದಾನಿ’, ಶ್ರೀಮಂತ ಭಾರತೀಯ ಪಟ್ಟ