ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ (CBSE) 12ನೇ ತರಗತಿ ಕಂಪಾರ್ಟ್ಮೆಂಟ್ ಪರೀಕ್ಷೆ 2024ರ ಫಲಿತಾಂಶವನ್ನ ಇಂದು ಪ್ರಕಟಿಸಿದೆ. ಕಂಪಾರ್ಟ್ಮೆಂಟ್ / ಪೂರಕ ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಮ್ಮ ಸ್ಕೋರ್ಕಾರ್ಡ್ಗಳನ್ನ ಅಧಿಕೃತ ವೆಬ್ಸೈಟ್ cbseresults.nic.inನಿಂದ ಪರಿಶೀಲಿಸಬಹುದು.
CBSE ಜುಲೈ 15 ರಿಂದ 22 ರವರೆಗೆ ಪೂರಕ ಪರೀಕ್ಷೆಗಳನ್ನ ನಡೆಸಿತು. ಈ ವರ್ಷ, 1,22,170 12 ನೇ ತರಗತಿ ವಿದ್ಯಾರ್ಥಿಗಳು ಮತ್ತು 1,32,337 10ನೇ ತರಗತಿ ವಿದ್ಯಾರ್ಥಿಗಳು ಸೇರಿದಂತೆ 2 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನ ಕಂಪಾರ್ಟ್ಮೆಂಟ್ ವಿಭಾಗದಲ್ಲಿ ಇರಿಸಲಾಗಿದ್ದು, ನಿಯಮಿತ ಪರೀಕ್ಷೆಗಳಲ್ಲಿ ಒಂದು ಅಥವಾ ಎರಡು ವಿಷಯಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ತಮ್ಮ ಅಂಕಗಳನ್ನ ಸುಧಾರಿಸಲು ಅವಕಾಶ ನೀಡಲಾಗಿದೆ.
ಸಿಬಿಎಸ್ಇ 12ನೇ ತರಗತಿ ಫಲಿತಾಂಶ 2024 ಚೆಕ್ ಮಾಡುವುದು ಹೇಗೆ.?
ಹಂತ 1. ಸಿಬಿಎಸ್ಇ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ: cbse.gov.in ಅಥವಾ results.cbse.nic.in.
ಹಂತ 2. ಮುಖಪುಟದಲ್ಲಿ “ಫಲಿತಾಂಶಗಳು” ಅಥವಾ “ಕಂಪಾರ್ಟ್ಮೆಂಟ್ ಫಲಿತಾಂಶಗಳು” ವಿಭಾಗವನ್ನ ಹುಡುಕಿ.
ಹಂತ 3. “ಕಂಪಾರ್ಟ್ಮೆಂಟ್ ಎಕ್ಸಾಮಿನೇಷನ್ ಫಲಿತಾಂಶ 2024” ಗಾಗಿ ಲಿಂಕ್ ಕ್ಲಿಕ್ ಮಾಡಿ.
ಹಂತ 4. ಸೂಚಿಸಿದಂತೆ ನಿಮ್ಮ ರೋಲ್ ಸಂಖ್ಯೆ, ಶಾಲಾ ಸಂಖ್ಯೆ ಮತ್ತು ಇತರ ಯಾವುದೇ ಅಗತ್ಯ ವಿವರಗಳನ್ನು ನಮೂದಿಸಿ.
ಹಂತ 5. ನಿಮ್ಮ ಫಲಿತಾಂಶಗಳನ್ನು ವೀಕ್ಷಿಸಲು “ಸಲ್ಲಿಸು” ಕ್ಲಿಕ್ ಮಾಡಿ.
ಹಂತ 6. ಭವಿಷ್ಯದ ಉಲ್ಲೇಖಕ್ಕಾಗಿ ನಿಮ್ಮ ಸ್ಕೋರ್ ಕಾರ್ಡ್ ನ ನಕಲನ್ನು ಡೌನ್ ಲೋಡ್ ಮಾಡಿ ಮತ್ತು ಮುದ್ರಿಸಿ.
‘BCCI’ಗೆ 158 ಕೋಟಿ ಬಾಕಿ ಪಾವತಿಗೆ ‘ಬೈಜುಸ್’ ಒಪ್ಪಿಗೆ ; ಸಂಘರ್ಷ ಇತ್ಯರ್ಥಕ್ಕೆ ‘NCLAT’ ಅನುಮೋದನೆ
BREAKING : 25 ಮೀಟರ್ ‘ಏರ್ ಪಿಸ್ತೂಲ್ ಫೈನಲ್’ಗೆ ‘ಮನು ಭಾಕರ್’ ಲಗ್ಗೆ, 3ನೇ ಪದಕ ಮೇಲೆ ಕಣ್ಣು |Paris Olympics