ಶಿವಮೊಗ್ಗ: ಇಂದು ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಅಧ್ಯಕ್ಷತೆಯಲ್ಲಿ ಮಳಎಹಾನಿ ಕುರಿತು ಪರಿಶೀಲನಾ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅಧಿಕಾರಿಗಳಿಗೆ ಸಾಗರ ತಾಲ್ಲೂಕಿನಲ್ಲಿ ಮಳೆಹಾನಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಖಡಕ್ ಸೂಚನೆ ನೀಡಿದರು.
ಇಂದು ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಪ್ರವಾಸಿ ಮಂದಿರದಲ್ಲಿ ಮಳೆಹಾನಿ ಕುರಿತು ಪರಿಶೀಲನಾ ಸಭೆ ನಡೆಸಿದಂತ ಅವರು, ನಾನು ಎಲ್ಲಾ ಕಡೆ ಭೇಟಿ ನೀಡಿದ್ದೇನೆ. ಬಹಳಷ್ಟು ಹಾನಿಯಾಗಿದೆ. ಈಗಾಗಲೇ ಮೋರಿಗಳು ಕೊಚ್ಚಿಕೊಂಡು ಹೋಗಿದ್ದಾವೆ. ಗದ್ದೆ ದಂಡೆಗಳು ಕೊಚ್ಚಿಕೊಂಡು ಹೋಗಿದ್ದಾವೆ. ಅಂಗನವಾಡಿಗಳು ಹಾನಿಯಾಗಿದ್ದಾವೆ. ಇವೆಲ್ಲವನ್ನು ಆದಷ್ಟು ವರದಿ ಕಳುಹಿಸಲು ಸೂಚಿಸಲಾಗಿದೆ.
ರಸ್ತೆಗಳು ಸಂಪೂರ್ಣವಾಗಿ ಕಿತ್ತುಹೋಗಿದ್ದಾವೆ. ಮೆಳೆಹಾನಿ ವರದಿಯನ್ನು ಪಿಡಿಓಗಳು ನೀಡಬೇಕು. ಆ ಕೆಲಸವನ್ನು ಮಾಡಬೇಕು ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ತಿಳಿಸಿದರು.
ನಾನು ಮೆಳೆಹಾನಿ ಸ್ಥಳಗಳಿಗೆ ಭೇಟಿ ನೀಡುವಂತ ಸಂದರ್ಭದಲ್ಲಿ ಪಿಡಿಓ ಸೇರಿದಂತೆ ಎಲ್ಲಾ ಅಧಿಕಾರಿಗಳು ಸ್ಥಳದಲ್ಲಿಯೇ ಇರಬೇಕು ಅಂತ ಅಧಿಕಾರಿಗಳಿಗೆ ಸೂಚಿಸಿದರು.
ಆಚಾಪುರ ಗ್ರಾಮದಲ್ಲಿ ಮನೆ ಗೋಡೆ ಬಿದ್ದಿದೆ. ಕುದರೂರು ಗ್ರಾಮ ಜಮೀಮಿನಲ್ಲಿ ಧರೆ ಕುಸಿತವಾಗಿದೆ. ಬರೂರು ಗ್ರಾಮ ಪಂಚಾಯಿ ಜಾನುವಾರು ಕೊಟ್ಟಿಗೆ ಬಿದ್ದಿದೆ. ತುಮರಿ ಗ್ರಾಮದಲ್ಲಿ ಮನೆ ಹಾನಿ. ಗುಡ್ಡೆ ಕೌತಿ ಗ್ರಾಮದಲ್ಲಿ ಮನೆಯ ಗೋಡೆ ಕುಸಿತ. ಹೊಸಮನೆಯಲ್ಲಿ ಕೊಟ್ಟಿಗೆ ಸಂಪೂರ್ಣ ಹಾನಿಯಾಗಿದೆ. ತ್ಯಾಗರ್ತಿಯಲ್ಲಿ ಮನೆ ಸಂಪೂರ್ಣ ಹಾನಿಯಾಗಿದೆ ಎನ್ನುವ ಮಾಹಿತಿಯನ್ನು ಅಧಿಕಾರಿಗಳಿಂದ ಶಾಸಕ ಬೇಳೂರು ಗೋಪಾಲಕೃಷ್ಣ ಪಡೆದುಕೊಂಡರು.
ಯಾವುದೇ ವರದಿಯನ್ನು ತಡ ಮಾಡುವಂತಿಲ್ಲ. ತಕ್ಷಣವೇ ಆಯಾ ಮೇಲಧಿಕಾರಿಗಳಿಗೆ ತಲುಪಿಸಬೇಕು. ಅವರು ಜಿಲ್ಲಾಧಿಕಾರಿಗಳು, ಸಂಬಂಧಿಸಿದ ಸಚಿವರುಗಳಿಗೆ ಸಲ್ಲಿಸುವಂತ ಕ್ರಮವಾಗಬೇಕು ಎಂದರು.
ರಾಜ್ಯ ಸರ್ಕಾರವನ್ನು ಮಳೆಹಾನಿಗೆ ನೀಡುವಂತ ಪರಿಹಾರವನ್ನು ಹೆಚ್ಚಿಸುವ ಸಂಬಂಧ ಮನವಿ ಮಾಡಲಾಗುತ್ತದೆ. 1.50 ಲಕ್ಷ ಪರಿಹಾರವೂ ಯಾವುದಕ್ಕೂ ಸಾಕಾಗುವುದಿಲ್ಲ. ಅದನ್ನು 3 ರಿಂದ 5 ಲಕ್ಷಕ್ಕೆ ಹೆಚ್ಚಿಸುವಂತೆ ಕೋರಲಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಾಗರ ನಗರಸಭೆ ಆಯುಕ್ತ ನಾಗಪ್ಪ ಅವರು ರಾಜ್ಯ ಸರ್ಕಾರವು ನೆರೆಹಾನಿ ಪರಿಹಾರವನ್ನು ಪರಿಷ್ಕರಿಸಿದೆ. ಸಾಮಾನ್ಯ ವರ್ಗದವರಿಗೆ 1.20 ಲಕ್ಷ ಪರಿಹಾರವನ್ನು ನಿಗದಿಪಡಿಸಿದೆ. ಎಸ್ಸಿ, ಎಸ್ಟಿಗಳಿಗೆ 1.50 ಲಕ್ಷ ಪರಿಹಾರವನ್ನು ನೀಡುವಂತೆ ಆದೇಶದಲ್ಲಿ ತಿಳಿಸಲಾಗಿದೆ ಎಂಬುದಾಗಿ ಶಾಸಕರ ಗಮನಕ್ಕೆ ತಂದರು.
ಕೃಷಿ ಇಲಾಖೆಯ ಅಧಿಕಾರಿ ಮಾತನಾಡಿ ಜುಲೈನಲ್ಲಿ 847 ಮಿಲಿ ಮೀಟರ್ ಮಳೆಯಾಗಬೇಕಿತ್ತು. ಈಗ ಆಗಿರುವುದು 1867 ಮಿಮೀ ಆಗಿದೆ. ಶೇ.172ರಷ್ಟು ಅಧಿಕ ಮಳೆಯಾಗಿದೆ. ಕಳೆದ ಒಂದು ವಾರದಲ್ಲಿ 179 ಮಿಮೀ ಮಳೆಯಾಗಬೇಕಿತ್ತು. ಆಗಿರುವುದು 379 ಮಿಲಿ ಮೀಟರ್. ಜನವರಿಯಿಂದ ಶೇ.78ರಷ್ಟು ಅಧಿಕ ಮಳೆ ಸಾಗರ ತಾಲ್ಲೂಕಿನಲ್ಲಿ ಆಗಿದೆ. ಮಳೆಯಿಂದಾಗಿ 1,025 ಎಕ್ಟೇರ್ ಕೃಷಿ ಭೂಮಿ ಜಲಾವೃತವಾಗಿದೆ ಎಂದರು.
ಈ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ನಾನು ಸಾಗರ ತಾಲ್ಲೂಕಿನ ಹಲವೆಡೆ ಭೇಟಿ ನೀಡಿದ್ದೇನೆ. ಭತ್ತವಲ್ಲದೇ, ಮುಸಿಕಿನ ಜೋಳ ಹೆಚ್ಚಾಗಿ ಹಾಳಾಗಿದೆ. ಆ ಬಗ್ಗೆ ನೀವು ಮತ್ತೊಮ್ಮೆ ಪರಿಶೀಲನೆ ನಡೆಸಿ, ವರದಿ ತರಿಸಿಕೊಂಡು ಸರಿಯಾದ ಮಾಹಿತಿಯನ್ನು ತಮಗೆ ನೀಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
93 ಶಾಲೆಯ ತರಗತಿ ಕೊಠಿಡಿಗಳು ಮಳೆಯಿಂದ ಹಾನಿಯಾಗಿದ್ದಾರೆ. ಅವುಗಳನ್ನು ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳಿಗೆ ವರದಿಯನ್ನು ನೀಡಲಾಗಿದೆ ಎಂದಾಗ, ಶಾಲಾ ಮಕ್ಕಳಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಬೇಕು. ಶಾಲಾ ಉಸ್ತುವಾರಿ ಸಮಿತಿಯವರು ಮುಂಜಾಗ್ರತೆ ವಹಿಸಬೇಕು. ನಾನು ರಿಪ್ಪನ್ ಪೇಟೆಗೆ ಹೋಗಿದ್ದೆ ಅಲ್ಲಿನ ಉರ್ದು ಶಾಲೆಯ ಕಾಂಪೌಂಡ್ ಗೋಡೆ ಸಂಪೂರ್ಣ ಹಾನಿಯಾಗಿದ್ದನ್ನು ಗಮನಿಸಿದ್ದೇನೆ. ರಾತ್ರಿ ಆಗಿರುವುದು. ಬೆಳಿಗ್ಗೆ ಆಗಿದ್ದರೇ ಮಕ್ಕಳಿಗೆ ತೊಂದರೆಯಾಗುತ್ತಿತ್ತು. ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಗಳಾದಂತ ನೀವು ಡೈಲಿ ವರದಿ ತರಿಸಿಕೊಂಡು ಚರ್ಚಿಸಿ, ಕ್ರಮವಹಿಸುವ ಕಾರ್ಯ ನಡೆಯಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಸೂಚಿಸಿದರು.
ಸಾಗರ ತಾಲ್ಲೂಕಿನಲ್ಲಿ ಭಾರೀ ಮಳೆಯಿಂದಾಗಿ 283 ಕಂಬ ಮುರಿದು ಬಿದ್ದಿದ್ದಾವೆ. ಅವುಗಳನ್ನು ಬದಲಾಯಿಸುವಂತ ಕಾರ್ಯ ಮಾಡಲಾಗಿದೆ. 24 ಗಂಟೆಯಲ್ಲೇ ಮಳೆಯಿಂದ ಉಂಟಾದಂತ ವಿದ್ಯುತ್ ಕಂಬಗಳ ಹಾನಿಗಳ ರಿಪೇರಿಗೊಳಿಸುವಂತ ಕ್ರಮ ಕೈಗೊಳ್ಳಲಾಗಿದೆ ಎಂಬುದಾಗಿ ಮೆಸ್ಕಾಂ ಅಧಿಕಾರಿಗಳು ಶಾಸಕರಿಗೆ ಮಾಹಿತಿ ನೀಡಿದರು.
ಇನ್ಮೇಲೆ ವಿಭಾಗ ವ್ಯಾಪ್ತಿಯ ವಿದ್ಯುತ್ ನಿರ್ವಹಣೆ ಕಾಮಗಾರಿಯನ್ನು ನೀಡುವುದನ್ನು ಕೂಡಲೇ ನಿಲ್ಲಿಸಬೇಕು. ವಿದ್ಯುತ್ ಕಂಬ ಸರಿ ಪಡಿಸುವಂತ ಗುತ್ತಿಗೆದಾರರಿಗೆ ವ್ಯಾಪ್ತಿಯನ್ನು ನಿಗದಿ ಪಡಿಸುವುದನ್ನು ರದ್ದುಪಡಿಸಬೇಕು. ಯಾರು ಚೆನ್ನಾಗಿ ಕೆಲಸ ಮಾಡುತ್ತಾರೋ ಅವರಿಗೆ ಕೆಲಸ ಮಾಡಲು ಅವಕಾಶ ಕೊಡಿ. ಒಂದು ಕಂಬ ಬಿದ್ದರೂ ಸರಿಯೇ, ಎರಡು ಕಂಬವಾದರೂ, ಐದು ಕಂಬ ಆದರೂ ಸರಿಯೇ ಕೂಡಲೇ ಸರಿ ಮಾಡುವ ಕೆಲಸ ಮಾಡುವವರಿಗೆ ಗುತ್ತಿಗೆ ನೀಡುವಂತೆ ಶಾಸಕ ಬೇಳೂರು ಗೋಪಾಲಕೃಷ್ಣ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
83 ಶಿಥಿಲಾವಸ್ಥೆಯಲ್ಲಿ ಅಂಗನವಾಡಿ ಕಟ್ಟಡಗಳು ಇದ್ದಾವೆ. ಅವುಗಳನ್ನು ಸರಿ ಪಡಿಸುವಂತ ಕೆಲಸ ಆಗಬೇಕಿದೆ. ಕೆಲವೊಂದು ಮಕ್ಕಳನ್ನು ಕೂರಿಸಲು ಆಗದಂತ ಕಡೆಯಲ್ಲಿ ಸಮೀಪದ ಕಟ್ಟಡಗಳಿಗೆ ಶಿಫ್ಟ್ ಮಾಡಲಾಗಿದೆ ಎಂಬುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದರು. ಆಗ ಮಳೆಗಾಲದ ಈ ಹೊತ್ತಿನಲ್ಲಿ ಯಾರಿಗೂ ರಜೆ ನೀಡಬಾರದು. ಸಣ್ಣಸಣ್ಣ ಮಕ್ಕಳು ಅಂಗನವಾಡಿಗಳಲ್ಲಿ ಇರುತ್ತಾವೆ. ಅವರ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಶಾಸಕರು ತಿಳಿಸಿದರು.
ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದಂತ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ರಾಜ್ಯ ಸರ್ಕಾರ ಅನಧಿಕೃತ ಮನೆಗಳಿಗೂ 1 ಲಕ್ಷ ಪರಿಹಾರ ನೀಡುವಂತೆ ಆದೇಶ ಮಾಡಿದೆ. ಮಳೆಯಿಂದ ಮನೆಯಾದವರಿಗೆ ಕೂಡಲೇ 2500 ಬಟ್ಟೆ ಖರೀದಿಗೆ, 2500 ಪಾತ್ರೆ ಖರೀದಿಗೆ ನೀಡುವಂತೆ ಆದೇಶದಲ್ಲಿ ತಿಳಿಸಿದೆ. ಇಂತಹ ನಿರ್ಧಾರವನ್ನು ಕೈಗೊಂಡ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಅಭಿನಂದನೆ ತಿಳಿಸಿದರು.
ಹಾನಿ ಪ್ರದೇಶಗಳಿಗೆ ಪ್ರತಿಯೊಬ್ಬ ಅಧಿಕಾರಿಗಳು ಭೇಟಿ ನೀಡುವಂತೆ ಸೂಚಿಸಲಾಗಿದೆ. ಜೊತೆಗೆ ಯಾವುದೇ ತಡಮಾಡದೇ ಕೂಡಲೇ ಮಳೆಹಾನಿಯ ವರದಿಯನ್ನು ಸಂಬಂಧಿಸಿದಂತ ಮೇಲಧಿಕಾರಿಗಳಿಗೆ ಸಲ್ಲಿಸೋದಕ್ಕೆ ತಿಳಿಸಿದ್ದೇನೆ. ಮೇಲಧಿಕಾರಿಗಳು ಸರ್ಕಾರದ ಮಟ್ಟಕ್ಕೆ ವರದಿ ಸಲ್ಲಿಸಿ ಸೂಕ್ತ ಕ್ರಮವಹಿಸುವ ಕ್ರಮವಾಗಬೇಕು ಎಂದರು.
ಪಂಚಾಯ್ತಿ ವ್ಯಾಪ್ತಿಯಲ್ಲಿ ಅಧಿಕಾರಿಗಳು ಮಾಹಿತಿಯನ್ನು ಸಂಗ್ರಹಿಸಬೇಕು. ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳಿಗೆ ನೀಡಬೇಕು. ಅವರು ಜಿಲ್ಲಾಧಿಕಾರಿಗಳಿಗೆ, ಜಿಲ್ಲಾಧಿಕಾರಿಗಳು ರಾಜ್ಯ ಸರ್ಕಾರಕ್ಕೆ ಮಳೆಹಾನಿಯ ಮಾಹಿತಿಯನ್ನು ಸಲ್ಲಿಸುವಂತ ಕ್ರಮವಾಗಬೇಕು. ಯಾರಿಗೂ ತೊಂದರೆ ಆಗದಂತೆ ಕ್ರಮವಹಿಸುವಂತೆ ಸೂಚಿಸಿದ್ದೇನೆ ಎಂದರು.
ಸಾಗರ ತಾಲ್ಲೂಕಿನಲ್ಲಿ ಮಳೆಹಾನಿಯಿಂದ 2 ಜಾನುವಾರುಗಳು ಮಾತ್ರವೇ ಸಾವನ್ನಪ್ಪಿದ್ದಾವೆ. ಯಾವುದೇ ಪ್ರಾಣಹಾನಿಯಾಗಿಲ್ಲ. ಸಾಗರ ತಾಲ್ಲೂಕಿನಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಒಟ್ಟು 100 ಮನೆಗಳು ಹಾನಿಗೊಂಡಿದ್ದಾವೆ ಎಂಬುದಾಗಿ ಶಾಸಕ ಬೇಳೂರು ಗೋಪಾಲಕೃಷ್ಣ ಮಾಹಿತಿ ನೀಡಿದರು.
ವರದಿ: ವಸಂತ ಬಿ ಈಶ್ವರಗೆರೆ, ಸಂಪಾದಕರು
BREAKING : CBSE 12ನೇ ತರಗತಿ ‘ಕಂಪಾರ್ಟ್ಮೆಂಟ್ ಪರೀಕ್ಷೆ’ಯ ಫಲಿತಾಂಶ ಪ್ರಕಟ : ಈ ರೀತಿ ರಿಸಲ್ಟ್ ಚೆಕ್ ಮಾಡಿ!