ಬೆಂಗಳೂರು: ನಟ ದರ್ಶನ್ ಗೆ ರೇಣುಕಾಸ್ವಾಮಿ ಕೊಲೆ ಕೇಸಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದೆ. ಕಾರಣ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಬಲವಾದ ಸಾಕ್ಷ್ಯ ಲಭ್ಯವಾಗಿರುವುದಾಗಿದೆ.
ಹೌದು ನಟ ದರ್ಶನ್ ಅವರು ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರಿಗೆ ಬಲವಾದ ಸಾಕ್ಷ್ಯ ಲಭ್ಯವಾಗಿದೆ. ಅದೇ ನಟ ದರ್ಶನ್ ಮನೆಯಲ್ಲಿನ ಸಿಸಿಟಿವಿ ದೃಶ್ಯಾವಳಿಯನ್ನು ಡಿಲಿಟ್ ಮಾಡಿರೋದನ್ನು, ರಿಟ್ರೀವ್ ಮಾಡಿರುವುದೇ ಆಗಿದೆ.
ಜೂನ್.8, 9 ಹಾಗೂ 10ರಂದು ನಟ ದರ್ಶನ್ ಮನೆಯಲ್ಲಿನ ಸಿಸಿಟಿವಿ ಡಿವಿಆರ್ ನಲ್ಲಿನ ದೃಶ್ಯಾವಳಿಯನ್ನು ಡಿಲಿಟ್ ಮಾಡಲಾಗಿತ್ತು. ಸಿಸಿಟಿವಿ ಡಿವಿಆರ್ ಕೊಂಡೊಯ್ತಿದ್ದಂತ ಪೊಲೀಸರು ಅದರಲ್ಲಿನ ವೀಡಿಯೋ ರಿಟ್ರೀವಿಗೆ ಪ್ರಯತ್ನಿಸಿದ್ದರು. ಅದು ಸಾಧ್ಯವಾಗಿದೆ.
ನಟ ದರ್ಶನ್ ಮನೆಗೆ ಗ್ಯಾಂಗ್ ನ ಸದಸ್ಯರು ಬಂದು ಹೋಗಿರುವುದು ಸಿಸಿಟಿವಿ ರಿಟ್ರೀವ್ ದೃಶ್ಯಾವಳಿಯಲ್ಲಿ ಲಭ್ಯವಾಗಿದೆ ಎನ್ನಲಾಗುತ್ತಿದೆ. ಇದಷ್ಟೇ ಅಲ್ಲದೇ ಶವ ಸಾಗಿಸುತ್ತಿದ್ದರ ಬಗ್ಗೆ ಸಿಕ್ಕ ಸಾಕ್ಷ್ಯಾಧಾರಗಳಲ್ಲಿ ನಟ ದರ್ಶನ್ ಫಿಂಗರ್ ಪ್ರಿಂಟ್ ಕೂಡ ದೊರೆತಿದೆ ಎಂದು ಹೇಳಲಾಗುತ್ತಿದೆ.
ಇನ್ನೂ ಪವಿತ್ರಾ ಗೌಡಗೂ ಸಂಕಷ್ಟ ಎದುರಾಗಿದ್ದೂ, ರೇಣುಕಾಸ್ವಾಮಿ ಕಳುಹಿಸಿದ್ದಂತ ಎಲ್ಲಾ ಸಂದೇಶಗಳನ್ನು ಪೊಲೀಸರು ರಿಟ್ರೀವ್ ಮಾಡಿದ್ದಾರೆ. ವಾಟ್ಸ್ ಅಪ್, ಫೇಸ್ ಬುಕ್, ಇನ್ಸ್ಟಾಗ್ರಾಂನ ಎಲ್ಲಾ ಸಂದೇಶಗಳನ್ನು ರಿಟ್ರೀವ್ ಮಾಡಿರೋದಾಗಿ ತಿಳಿದು ಬಂದಿದೆ. ಹೀಗಾಗಿ ನಟ ದರ್ಶನ್ ಹಾಗೂ ಗ್ಯಾಂಗ್ ಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮತ್ತಷ್ಟು ಸಂಕಷ್ಟ ಎದುರಾಗಿದೆ.
‘ಅಂತರ್ಜಾತಿ ವಿವಾಹ’ಕ್ಕೆ ಪೋಷಕರ ವಿರೋಧ: ಪ್ರೇಮಿಗಳಿಬ್ಬರು ‘ಆತ್ಮಹತ್ಯೆ’ಗೆ ಶರಣು
ನ್ಯಾನೋ ತಂತ್ರಜ್ಞಾನ ಸಮ್ಮೇಳನ ಮಾದರಿಯಲ್ಲಿ ಬೆಂಗಳೂರು ಕ್ವಾಂಟಮ್ ತಂತ್ರಜ್ಞಾನ ಸಮ್ಮೇಳನ: ಡಿ.ಕೆ.ಶಿವಕುಮಾರ್