ಬಳ್ಳಾರಿ: ಅಂತರ್ಜಾತಿ ವಿವಾಹಕ್ಕೆ ವಿರೋಧ ವ್ಯಕ್ತ ಪಡಿಸಿದ ಹಿನ್ನಲೆಯಲ್ಲಿ ಪ್ರೇಮಿಗಳಿಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವಂತ ಘಟನೆ ಬಳ್ಳಾರಿಯ ಸಿರಗುಪ್ಪದಲ್ಲಿ ನಡೆದಿದೆ.
ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ಜಮೀನೊಂದರಲ್ಲಿ ವಿಷ ಸೇವಿಸಿ ರಾಜು(23) ಹಾಗೂ ಪವಿತ್ರಾ(20) ಆತ್ಮಹತ್ಯೆಗೆ ಶರಣಾದಂತ ಪ್ರೇಮಿಗಳಾಗಿದ್ದಾರೆ. ಅನ್ಯ ಜಾತಿಯವರಾಗಿದ್ದಂತ ಇಬ್ಬರೂ, ಪರಸ್ಪರ ಪ್ರೀತಿಸುತ್ತಿದ್ದರು. ಆದರೇ ಇವರ ವಿವಾಹಕ್ಕೆ ಮನೆಯಲ್ಲಿ ಪೋಷಕರು ವಿರೋಧ ವ್ಯಕ್ತ ಪಡಿಸಿದ್ದರು.
ಈ ಹಿನ್ನಲೆಯಲ್ಲಿ ಇಂದು ಸಿರಗುಪ್ಪದ ಜಮೀನೊಂದರಲ್ಲಿ ವಿಷ ಸೇವಿಸಿ ರಾಜು ಹಾಗೂ ಪವಿತ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ತಿಳಿದಂತ ಸಿರಗುಪ್ಪ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.
ಮುಡಾ ಹಗರಣದ ಬಗ್ಗೆ ‘ರಾಜ್ಯಪಾಲ’ರಿಂದ ನೋಟಿಸ್ ವಿಚಾರ: ‘ಸಿಎಂ ಸಿದ್ಧರಾಮಯ್ಯ’ ಹೇಳಿದ್ದೇನು? ಇಲ್ಲಿದೆ