ನವದೆಹಲಿ : ಜುಲೈ 2024ರಲ್ಲಿ ಜಿಎಸ್ಟಿ ಸಂಗ್ರಹವು 1,82,075 ಕೋಟಿ ರೂ.ಗಳಾಗಿದ್ದು, 2023ರ ಜುಲೈನಲ್ಲಿ 1,65,105 ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ 2024ರ ಜುಲೈನಲ್ಲಿ ಜಿಎಸ್ಟಿ ಸಂಗ್ರಹವು ಶೇಕಡಾ 10.2ರಷ್ಟು ಹೆಚ್ಚಾಗಿದೆ. ಜೂನ್ 2024ರಲ್ಲಿ ಜಿಎಸ್ಟಿ ಮರುಪಡೆಯುವಿಕೆಯಲ್ಲಿ 1.74 ಲಕ್ಷ ಕೋಟಿ ರೂಪಾಯಿ ಆಗಿದೆ.
ಈ ಡೇಟಾವನ್ನ ಜಿಎಸ್ಟಿ ಕೌನ್ಸಿಲ್’ನ ಪೋರ್ಟಲ್’ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ಜುಲೈ 2024ರಲ್ಲಿ ಸಿಜಿಎಸ್‌ಟಿ ಮೂಲಕ 32,386 ಕೋಟಿ ರೂಪಾಯಿ, ಎಸ್‌ಜಿಎಸ್‌ಟಿ ಮೂಲಕ 40,289 ಕೋಟಿ ರೂಪಾಯಿ, ಐಜಿಎಸ್‌ಟಿ ಮೂಲಕ 49,437 ಕೋಟಿ ರೂಪಾಯಿ ಮತ್ತು ಸೆಸ್ ಮೂಲಕ 11,923 ಕೋಟಿ ರೂಪಾಯಿ ಸ್ವೀಕರಿಸಲಾಗಿದೆ ಎಂದು ತಿಳಿಸಲಾಗಿದೆ. ಆಮದು ಮಾಡಿಕೊಳ್ಳುವಲ್ಲಿ ಐಜಿಎಸ್‌ಟಿ ಮೂಲಕ 47009 ಕೋಟಿ ಹಾಗೂ ಸೆಸ್ ಮೂಲಕ 1029 ಕೋಟಿ ಸಂಗ್ರಹಿಸಲಾಗಿದೆ. ಅಂಕಿ-ಅಂಶಗಳ ಪ್ರಕಾರ, 7813 ಕೋಟಿ ರೂಪಾಯಿಗಳ ದೇಶೀಯ ಮರುಪಾವತಿಯನ್ನ ನೀಡಲಾಗಿದೆ ಮತ್ತು 8470 ಕೋಟಿ ರೂಪಾಯಿಗಳ ಐಜಿಎಸ್ಟಿ ಮರುಪಾವತಿಯನ್ನ ನೀಡಲಾಗಿದೆ.
ಇನ್ಮುಂದೆ GST ವೆಬ್‌ಸೈಟ್ https://www.gst.gov.in ನಲ್ಲಿನ ಸುದ್ದಿ ಮತ್ತು ನವೀಕರಣಗಳ ವಿಭಾಗದಲ್ಲಿ ಸರಕು ಮತ್ತು ಸೇವಾ ತೆರಿಗೆಯ ಮಾಸಿಕ ಡೇಟಾ ಲಭ್ಯವಿರುತ್ತದೆ ಎಂದು ಹಣಕಾಸು ಸಚಿವಾಲಯ ಹೇಳಿಕೆ ನೀಡಿದೆ. ಇನ್ಮುಂದೆ, ಈ ಪೋರ್ಟಲ್’ನಲ್ಲಿ ಜಿಎಸ್‌ಟಿ ಸಂಗ್ರಹ ಡೇಟಾವನ್ನು ಅಪ್‌ಲೋಡ್ ಮಾಡಲಾಗುತ್ತದೆ.