ಬೆಂಗಳೂರು : ನೋಂದಾಯಿತ ಕಾರ್ಮಿಕ ಪಿಂಚಣಿದಾರರ ಪತಿ ಅಥವಾ ಪತ್ನಿಗೆ ಮಂಡಳಿಯು ಕುಟುಂಬ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ. ಅರ್ಜಿದಾರರು ನೇರವಾಗಿ ಸಹಾಯಕ ಕಾರ್ಮಿಕ ಆಯುಕ್ತರ ಕಚೇರಿಯಲ್ಲಿ ಅರ್ಜಿ ಸಲ್ಲಿಸಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ನೋಂದಾಯಿತ ಕಾರ್ಮಿಕ ಪಿಂಚಣಿದಾರರ ಪತಿ ಅಥವಾ ಪತ್ನಿಗೆ ಮಂಡಳಿಯು ಮಾಸಿಕ ಪಿಂಚಣಿ ಸೌಲಭ್ಯವನ್ನು ನೀಡುತ್ತದೆ.
ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು
• ಮಂಡಳಿಯಿಂದ ನೀಡಿರುವ ಮೃತ ಫಲಾನುಭವಿಯ ಗುರುತಿನ ಚೀಟಿ
• ಪಿಂಚಣಿ ಮಂಜೂರಾತಿ ಆದೇಶ
• ರೇಷನ್ ಕಾರ್ಡ್ ಪ್ರತಿ
• ನೋಂದಣಿದಾರರ ಆಧಾರ್ ಕಾರ್ಡ್ ಪ್ರತಿ
• ಅವಲಂಬಿತರ ಬ್ಯಾಂಕ್ ಖಾತೆ ವಿವರ
• ಮರಣ ಪ್ರಮಾಣ ಪತ್ರ
• ಮೃತರ ಪತಿ ಅಥವಾ ಪತ್ನಿಯ ಆಧಾರ್ ಕಾರ್ಡ್ ಪ್ರತಿ
• ಅವಲಂಬಿತರ ವಾಸಸ್ಥಳ ಪ್ರಮಾಣ ಪತ್ರ
• ಅರ್ಜಿದಾರರ ಕೋರಿಕೆ ಪತ್ರ