ಪ್ಯಾರಿಸ್: ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ, ಪಿ.ವಿ.ಸಿಂಧು ಅವರ ಮೂರನೇ ಒಲಿಂಪಿಕ್ಸ್ ಅಭಿಯಾನವು ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ ನೇರ ಗೇಮ್ ಸೋಲಿನೊಂದಿಗೆ ಕೊನೆಗೊಂಡಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024 ರ ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್ ಸ್ಪರ್ಧೆಯ 16ನೇ ಸುತ್ತಿನಲ್ಲಿ ಪಿ.ವಿ.ಸಿಂಧು ಆರನೇ ಶ್ರೇಯಾಂಕದ ಚೀನಾದ ಹಿ ಬಿಂಗ್ ಜಿಯಾವೊ ವಿರುದ್ಧ 19-21, 14-21 ಅಂತರದಲ್ಲಿ ಸೋತು ಹೊರನಡೆದರು.