ಬೆಂಗಳೂರು : ಚಲನಚಿತ್ರ ಶೈಲಿ, ನಿಜ ಜೀವನದ ‘ಸಿಂಘಮಗಳು’ ರೋಲ್ ಮಾಡೆಲ್ ಗಳಲ್ಲ- ಅವರು ಖಳನಾಯಕರು ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಪೊಲೀಸರ ಕ್ರೌರ್ಯ/ಅಕ್ರಮಗಳು ನಮ್ಮ ಪ್ರಜಾಪ್ರಭುತ್ವಕ್ಕೆ ಅಪಾಯಗಳಾಗಿವೆ. ನಾವು ಸಮಾನತಾವಾದಿಗಳು ನಮ್ಮ ಸೈದ್ಧಾಂತಿಕ ಶತ್ರುಗಳಿಗೂ ಸಹ ಮಾನವ ಹಕ್ಕುಗಳನ್ನು ಕೋರಬೇಕು ಮತ್ತು ಪೊಲೀಸ್ ಉಲ್ಲಂಘನೆಗಳನ್ನು ಎಂದಿಗೂ ಸಮರ್ಥಿಸಬಾರದು ಎಂದಿದ್ದಾರೆ.
ಚಲನಚಿತ್ರ ಶೈಲಿ, ನಿಜ ಜೀವನದ ‘ಸಿಂಘಮಗಳು’ ರೋಲ್ ಮಾಡೆಲ್ ಗಳಲ್ಲ- ಅವರು ಖಳನಾಯಕರು. ಎಲ್ಲಾ ಕಾನೂನುಬಾಹಿರ ಚಿತ್ರಹಿಂಸೆ ವಿಧಾನಗಳನ್ನು ತನಿಖೆ ಮಾಡಿ ಶಿಕ್ಷಿಸಬೇಕು ಎಂದು ಹೇಳಿದ್ದಾರೆ.