ಮಂಡ್ಯ : ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಕಾವೇರಿ ಪ್ರವಾಹಕ್ಕೆ ರಸ್ತೆ ತಡೆಗೊಡೆ ಕೊಚ್ಚಿ ಹೋದ ಘಟನೆ ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ನಡೆದಿದೆ.
ರಾತ್ರಿ ಕಾವೇರಿ ನದಿ ನೀರಿನ ಪ್ರವಾಹಕ್ಕೆ ವೆಲ್ಲೆಸ್ಲಿ ಸಂಪರ್ಕ ರಸ್ತೆ ಸಂಪೂರ್ಣ ಮುಳುಗಡೆಯಾಗಿದ್ದು, ವಾಹದ ನೀರಿನ ರಭಸಕ್ಕೆ ರಸ್ತೆ ಸೇರಿ ತಡೆಗೋಡೆ ನಾಶವಾಗಿದೆ. ಬೀಳುವ ಹಂತಕ್ಕೆ ಬಾಗಿರೋ ನದಿ ದಡದಲ್ಲಿದ್ದ ವಿದ್ಯುತ್ ಕಂಬಗಳು. ಸೆಸ್ಕ್ ಸಿಬ್ಬಂದಿಗಳಿಂದ ಬೀಳು ಕಂಬಗಳ ದುರಸ್ತಿ ಕಾರ್ಯ ಮಾಡಿದ್ದಾರೆ.