ಬೆಂಗಳೂರು: ರಾಜ್ಯದ ಮಾನ್ಯತೆ ಪಡೆದಂತ ಪತ್ರಕರ್ತರಿಗೆ ನೀಡಲಾಗುತ್ತಿರುವಂತ ಕೆ ಎಸ್ ಆರ್ ಟಿ ಸಿ ಸ್ಮಾರ್ಟ್ ಕಾರ್ಡ್ ಬಸ್ ಪಾಸ್ ( Journalist KSRTC Bus Pass ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಈ ಕುರಿತಂತೆ ಕೆ ಎಸ್ ಆರ್ ಟಿ ಸಿಟ ಮುಖ್ಯ ಸಂಚಾರ ವ್ಯವಸ್ಥಾಪಕರು ಮಾಹಿತಿ ನೀಡಿದ್ದು, ಮಾನ್ಯತೆ ಪಡೆದ ಪತ್ರಕರ್ತರಿಗೆ ವಿತರಿಸಲಾಗಿರುವ ಸ್ಮಾರ್ಟ್ ಕಾರ್ಡ್ ನ ಅವಧಿಯು ದಿನಾಂಕ 31-12-2023ಕ್ಕೆ ಕೊನೆಗೊಂಡಿತ್ತು, ಅದನ್ನು ದಿನಾಂಕ 31-07-2024ರವರೆಗೆ ವಿಸ್ತರಿಸಲಾಗಿತ್ತು ಎಂದಿದ್ದಾರೆ.
ಆಡಳಿತಾತ್ಮಕ ಕಾರಣಗಳಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಮಾನ್ಯತೆ ಪಡೆದ ಪತ್ರಕರ್ತರಿಗೆ ಕೆಎಸ್ಆರ್ ಟಿಸಿಯಿಂದ ವಿತರಿಸಲಾಗಿರುವ ಸ್ಮಾರ್ಟ್ ಕಾರ್ಡ್ ಬಸ್ ಪಾಸ್ ಗಳ ಅವಧಿಯನ್ನು ದಿನಾಂಕ 10-08-2024ರವರೆಗೆ ವಿಸ್ತರಿಸಲಾಗಿರುತ್ತದೆ ಎಂದು ತಿಳಿಸಿದ್ದಾರೆ.
ದಿನಾಂಕ 31-12-2023ರವರೆಗೆ ಚಾಲ್ತಿಯಲ್ಲಿರುವ ಸ್ಮಾರ್ಟ್ ಕಾರ್ಡ್ ಬಸ್ ಪಾಸ್ ಗಳನ್ನು ಹೊಂದಿರುವ ಪತ್ರಕರ್ತರುಗಳನ್ನು ದಿನಾಂಕ 10-08-2024ರವರೆಗೆ ಕೆ ಎಸ್ ಆರ್ ಟಿಸಿಯ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಮತಿಸುವಂತೆ ನಿಗಮದ ಎಲ್ಲಾ ನಿರ್ವಾಹಕರಿಗೆ ಸೂಚಿಸಲಾಗಿದೆ. ಅಲ್ಲದೇ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕ್ರಮ ವಹಿಸಲು ತಿಳಿಸಲಾಗಿದೆ.
BIG UPDATE: ಬೆಂಗಳೂರಿಗೆ ರೈಲಿನಲ್ಲಿ ಬಂದಿದ್ದು ‘ನಾಯಿ ಮಾಂಸ’ವಲ್ಲ, ಕುರಿ ಮಾಂಸ: ‘ಆಹಾರ ಇಲಾಖೆ’ ಅಧಿಕೃತ ಮಾಹಿತಿ
‘ದೇವೇಗೌಡ’ರ ಕುಟುಂಬಕ್ಕೆ ವಿಷ ಇಟ್ಟವನ ಜತೆ ವೇದಿಕೆ ಹಂಚಿಕೊಳ್ಳಲು ಸಾಧ್ಯವೇ?: ‘HDK’ ಗುಡುಗು