ಬೆಂಗಳೂರು : ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ. ಅವರು ಜೈಲೂಟ ಬೇಡ. ಮನೆಯೂಟ ಬೇಕು ಅಂತ ಸಲ್ಲಿಸಿದ್ದಂತ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಆಗಸ್ಟ್ 20 ಕ್ಕೆ ಮುಂದೂಡಿದೆ. ಹೀಗಾಗಿ ನಟ ದರ್ಶನ್ ಗೆ ಜೈಲು ಊಟವೇ ಗತಿ ಎನ್ನುವಂತೆ ಆಗಿದೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವಂತ ನಟ ದರ್ಶನ್ ಅವರು, ತಮಗೆ ಜೈಲೂಟ ಬೇಡ, ಮನೆಯೂಟಕ್ಕೆ ಅವಕಾಶ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಆದರೇ ಹೈಕೋರ್ಟ್ ವಾದ- ಪ್ರತಿವಾದವನ್ನು ಆಲಿಸಿದ್ದು, ವಿಚಾರಣೆಯನ್ನು ಆಗಸ್ಟ್ 20 ಕ್ಕೆ ಮುಂದೂಡಿದೆ.
ಅಂದಹಾಗೇ ಈ ಹಿಂದೆ ನಟ ದರ್ಶನ್ ಪರ ವಕೀಲರು ಜೈಲೂಟದಿಂದ ತಮ್ಮ ಕಕ್ಷಿದಾರರು ತೂಕ ಇಳಿಕೆಯಾಗಿದ್ದಾರೆ. ಅವರಿಗೆ ಮನೆಯೂಟಕ್ಕೆ ಅವಕಾಶ ನೀಡಬೇಕು. ಓದೋದಕ್ಕೆ ಪುಸ್ತಕ, ಹಾಸಿಗೆ ಅವಕಾಶ ನೀಡಬೇಕು ಅಂತ ನ್ಯಾಯಪೀಠವರನ್ನು ಕೋರಿದ್ದರು.